Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಏಷ್ಯನ್‌ ಗೇಮ್ಸ್‌: 50 ಮೀಟರ್ ರೈಫಲ್ – ಚಿನ್ನ, ಕಂಚು ಗೆದ್ದ ಭಾರತ

ಹ್ಯಾಂಗ್ ಝೂ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡ ಶೂಟಿಂಗ್‌ ವಿಭಾಗದ 50 ಮೀಟರ್‌ 3 ಪೊಸಿಷನ್‌ ವಿಭಾಗದಲ್ಲಿ ಬಂಗಾರ ಮತ್ತು ಕಂಚಿನ ಪದಕ ಗೆದ್ದಿದೆ.

ಮಹಿಳೆಯರ 50 ಮೀಟರ್ 3 ರೈಫಲ್ ಪೊಸಿಷನ್​ ವಿಭಾಗದ ಫೈನಲ್​ನಲ್ಲಿ 469.6 ಅಂಕಗಳನ್ನು ಗಳಿಸುವ ಮೂಲಕ ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ ಭಾರತಕ್ಕೆ ಐದನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದೇ ವೇಳೆ ಆಶಿ ಚೌಕ್ಸಿ ಕಂಚಿನ ಪದಕ ಪಡೆದರು. ಒಂದೇ ವಿಭಾಗದಲ್ಲಿ ಭಾರತ ಎರಡು ಪದಕಗಳನ್ನು ಪಡೆದು ಇತಿಹಾಸ ಸೃಷ್ಟಿ ಮಾಡಿದೆ.

ಏಷ್ಯನ್ ಗೇಮ್ಸ್​ನ ನಾಲ್ಕನೇ ದಿನವಾದ ಬುಧವಾರ ಬೆಳಗ್ಗಿನಿಂದ ಭಾರತಕ್ಕೆ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದಕ ದೊರಕಿದಂತಾಗಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಗೋಲ್ಡ್‌ ಮೆಡಲ್‌ಗಳ ಸಂಖ್ಯೆ ಸದ್ಯ 5ಕ್ಕೇರಿದೆ.