ಏ. 9ರಂದು ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ರಥೋತ್ಸವ
ದಾವಣಗೆರೆ : ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ದಿನಾಂಕ 08-04-2024ರ ಸೋಮವಾರ ಯುಗಾದಿ ಅಮಾವಾಸ್ಯೆ ದಿನದಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ಗೋಧಿ ಉಡಿ ತುಂಬುವುದು, ನಂತರ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.
ದಿನಾಂಕ 09-04-2024ರ ಮಂಗಳವಾರ ಯುಗಾದಿ ಪಾಡ್ಯದಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಂಗಳಾರತಿ, ಸಂಜೆ 6-30ಕ್ಕೆ ಚಾಂದ್ರಮಾನ ಯುಗಾದಿ ಪ್ರಯುಕ್ತ ಶ್ರೀ ಕಾಳಿಕಾದೇವಿ ರಥೋತ್ಸವವನ್ನು ದೇವಸ್ಥಾನದಿಂದ ರಾಜಬೀದಿಗಳಲ್ಲಿ ನೆರವೇರಿಸಲಾಗುವುದು.
ರಥೋತ್ಸವವು ದೇವಸ್ಥಾನಕ್ಕೆ ಬಂದ ನಂತರ ಮಹಾಮಂಗಳಾರತಿ, ಬೇವು-ಬೆಲ್ಲದ ಪ್ರಸಾದವನ್ನು ವಿತರಿಸಲಾಗುವುದು ಎಂದು ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನ ಆಡಳಿತ ಸಮಿತಿ ಟ್ರಸ್ಟ್ ತಿಳಿಸಿದೆ.