Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಒಂದು ದಿನದ ಮಟ್ಟಿಗೆ ಬ್ರಿಟಿಷ್ ರಾಯಭಾರಿಯಾದ ಹುಬ್ಬಳ್ಳಿ ಯುವತಿ – ಬಹುದಿನದ ಕನಸು ನನಸು ಎಂದ ಸಂಜನಾ ಹಿರೇಮಠ

ಹುಬ್ಬಳ್ಳಿ : ಒಂದು ದಿನದ ಮಟ್ಟಿಗೆ ಬ್ರಿಟಿಷ್ ರಾಯಭಾರಿಯಾಗಿ ಹುಬ್ಬಳ್ಳಿಯ ಸಂಜನಾ ಹಿರೇಮಠ ಕಾರ್ಯ ನಿರ್ವಹಿಸಿದ್ದಾರೆ. ‘ಒಂದು ದಿನದ ರಾಯಭಾರಿ’ ಸ್ಪರ್ಧೆಯಲ್ಲಿ ವಿಜೇತರಾದ ಸಂಜನಾ ಹಿರೇಮಠ ಬ್ರಿಟಿಷ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದರು. ಬ್ರಿಟಿಷ್‌ ರಾಯಭಾರಿ ಕಚೇರಿಯಲ್ಲಿ ಸಮಯ ಕಳೆಯಬೇಕೆಂಬ ನನ್ನ ಕನಸು ನನಸಾಗಿದೆ. ರಾಯಭಾರಿ ಕಚೇರಿಯಲ್ಲಿರುವ ತಂಡದ ಸದಸ್ಯರನ್ನು ಹಾಗೂ ನಾಯಕಿಯರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಎಂದು ಸಂಜನಾ ಹಿರೇಮಠ ಹರ್ಷ ವ್ಯಕ್ತಪಡಿಸಿದ್ದಾರೆ. ಅಂತರರಾಷ್ಟ್ರೀಯ ಹೆಣ್ಣುಮಗುವಿನ ದಿನದ ಪ್ರಯುಕ್ತ ಭಾರತದಲ್ಲಿರುವ ಬ್ರಿಟಿಷ್‌ ರಾಯಭಾರಿ ಕಚೇರಿಯು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ 180 ಯುವತಿಯರು ಪಾಲ್ಗೊಂಡಿದ್ದರು. ಲಂಡನ್‌ ಸ್ಟಾಕ್‌ ಎಕ್ಸಚೇಂಜ್‌ ‌ಗ್ರೂಪ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಜನಾ ಹಿರೇಮಠ ವಿಜೇತರಾದರು. ಕರ್ನಾಟಕ ಹಾಗೂ ಕೇರಳಕ್ಕೆ ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್‌ ಚಂದ್ರು ಐಯ್ಯರ್‌ ಮಾತನಾಡಿ, ಹೆಣ್ಣುಮಕ್ಕಳ ಹಕ್ಕುಗಳ ಹಾಗೂ ಮಹಿಳಾ ನಾಯಕತ್ವದ ಬಗ್ಗೆ ಜಾಗೃತಿ ಮೂಡಿಸಲು ಯುವತಿಯರಿಗೆ ಇದು ಒಳ್ಳೆಯ ಅವಕಾಶ. ಸಂಜನಾ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಿದರು ಎಂದರು. ಆಸ್ಟ್ರೇಲಿಯಾದ ಕೌನ್ಸಲ್‌ ಜನರಲ್‌ ಹಿಲರಿ ಮ್ಯಾಕ್‌ಗಿಚಿ ಅವರೊಂದಿಗೆ ಜೋಳದ ರೊಟ್ಟಿ ಊಟ ಸವಿದರು. ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳ ಕುರಿತು ಹಾಗೂ ಮಹಿಳಾ ನಾಯಕತ್ವ ಕುರಿತು ಅವರೊಂದಿಗೆ ಚರ್ಚಿಸಿದರು.