Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಒಳ ಉಡುಪಿನಲ್ಲಿತ್ತು 2 ಕೋಟಿ ರೂಪಾಯಿ ಮೌಲ್ಯದ 3.9 ಕೆ.ಜಿ. ಚಿನ್ನ!

ನವದೆಹಲಿ,  ವಿಮಾನನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುವವರು ಸಿಕ್ಕಿಬೀಳುತ್ತಿರುವ ಪ್ರಕರಣಕ್ಕೆ ಇಂದು ಮತ್ತೊಂದು ಸೇರ್ಪಡೆ ಆಗಿದ್ದು, ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ.

ಎಐ ಏರ್ಪೋರ್ಟ್ ಸರ್ವಿಸಸ್ ಲಿಮಿಟೆಡ್ನ ಸಿಬ್ಬಂದಿಯೇ ಈ ಕಳ್ಳಸಾಗಣೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಶ್ರೀಲಂಕಾ ಮೂಲದ ಈ ವ್ಯಕ್ತಿಯನ್ನು ಸಿಐಎಸ್ಫ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿದೆ.

ಅನುಮಾನಾಸ್ಪದವಾಗಿ ಕಂಡುಬಂದ ಈ ವ್ಯಕ್ತಿಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದಾಗ ಒಳ ಉಡುಪಿನಲ್ಲಿ ಅಡಗಿಸಿ ಇರಿಸಿಕೊಂಡಿದ್ದ 3.9 ಕೆ.ಜಿ. ತೂಕದ ಚಿನ್ನದ ಪೇಸ್ಟ್ ಪತ್ತೆ ಆಗಿದೆ. ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಈ ಪೇಸ್ಟ್ ಇರಿಸಿಕೊಳ್ಳಲಾಗಿತ್ತು. ಇವುಗಳ ಒಟ್ಟು ಮೊತ್ತ 2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.