Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಓಡುತ್ತಿರುವಾಗ ಹೃದಯಾಘಾತ – 14 ವರ್ಷದ ಬಾಲಕ ಸಾವು.!

ವಾಷಿಂಗ್ಟನ್: ಶಾಲೆಯೊಂದರಲ್ಲಿ ನಡೆದ ಕ್ರೀಡಾಕೂಟದ ಐದು ಕಿಲೋಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 14 ವರ್ಷದ ಬಾಲಕ ಓಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ನಾಕ್ಸ್ ಮ್ಯಾಕ್‌ವೆನ್ ಎಂಬ ಬಾಲಕನೇ ಮೃತ ದುರ್ದೈವಿ. ಓಟದ ವೇಳೆ ಬಾಲಕ ನಾಕ್ಸ್ ಮ್ಯಾಕ್‌ವೆನ್ ಹೃದಯ ಸ್ತಂಭನಕ್ಕೆ ಒಳಗಾಗಿದ್ದು, ಶಾಲೆಗೆ ಬಂದ ತುರ್ತು ಸಿಬ್ಬಂದಿಗೆ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ ಬಾಲಕನು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.