ಕನ್ನಡ ಚಿತ್ರರಂಗದ ಮೋಸ್ಟ್ ಬ್ಯುಸಿ ಕಾಮಿಡಿ ನಟ ಯಾರು ಅಂಥ ಕೇಳಿದ್ರೆ ಎಲ್ಲರೂ ಹೇಳೋ ಒಂದೇ ಹೆಸರು ಚಿಕ್ಕಣ್ಣ. ಹೌದು ಸದ್ಯದ ಮಟ್ಟಿಗೆ ಚಿಕ್ಕಣ್ಣ ಕನ್ನಡ ಸಿನಿಮಾಗಳ ಸ್ಟಾರ್ ನಟರಿಂದ ಹಿಡಿದು ಹೊಸಬರ ಚಿತ್ರಗಳಿಗೂ ಬೇಕೆ ಬೇಕು.ಅಷ್ಟರ ಮಟ್ಟಿಗೆ ಚಿಕ್ಕಣ್ಣ ಕನ್ನಡ ಚಿತ್ರಗಳಿಗೆ ಅನಿವಾರ್ಯ.

 

ಕನ್ನಡ ಸಿನಿ ರಸಿಕರಿಗೂ ಚಿಕ್ಕಣ್ಣ ಅಂದ್ರೆ ತುಂಬಾ ಅಚ್ಚುಮೆಚ್ಚು. ಚಿಕ್ಕಣ್ಣ ತೆರೆ ಮೇಲೆ ಎಂಟ್ರಿ ಕೊಟ್ಟಾಗ ಹೀರೋಗಳಿಗೆ ಸಿಗುವ ಚಪ್ಪಾಳೆ ವಿಷಲ್ ಸಿಗುತ್ತದೆ ಅಂದ್ರೆ ಚಿಕ್ಕಣ್ಣನವರ ಪವರ್ ಎಷ್ಟು ಅಂತ ನೀವೇ ಊಹಿಸಿಕೊಳ್ಳಿ.ಇನ್ನು ಚಿಕ್ಕಣ್ಣ ಅವರ ಸಂಭಾವನೆ ಕೂಡ ಆಕಾಶ ಮುಟ್ಟಿದೆ ಎನ್ನುತ್ತಿದೆ ಗಾಂಧಿನಗರ.

 

ಚಿಕ್ಕಣ್ಣ ಅವರು ದಿನದ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದು ದಿನಕ್ಕೆ ಮೂರರಿಂದ ಐದು ಲಕ್ಷದವರೆಗೂ ಚಿಕ್ಕಣ್ಣ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತಿದೆ. ಅದೇನೆ ಇದ್ದರೂ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಕನ್ನಡ ಸಿನಿರಸಿಕರನ್ನೂ ರಂಜಿಸುವ ಚಿಕ್ಕಣ್ಣ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here