ಕಬ್ಬಿಣ, ಮರದ ದಿಮ್ಮಿ ಇಟ್ಟು ರೈಲ್ವೇ ಹಳಿ ತಪ್ಪಿಸಲು ಸ್ಕೆಚ್ – ಮೂವರ ಬಂಧನ
ಮೈಸೂರು: ಮೈಸೂರಿನಲ್ಲಿ ಭಾರಿ ರೈಲು ದುರಂತವೊಂದು ತಪ್ಪಿದ್ದು ರೈಲ್ವೇ ಹಳಿ ಮೇಲೆ ಕಬ್ಬಿಣದ ರಾಡ್ ಹಾಗೂ ಮರದ ದಿಮ್ಮಿ ಇಟ್ಟು ಹಳಿ ತಪ್ಪಿಸಲು ಸ್ಕೆಚ್ ಹಾಕಿದ್ದ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ನವಂಬರ್ 12ರಂದು ಚಾಮರಾಜನಗರದಿಂದ ಮೈಸೂರಿಗೆ ರೈಲು ಸಂಚರಿಸುತ್ತಿತ್ತು. ನಂಜನಗೂಡು ಮತ್ತು ಕಡಕೊಳದ ನಡುವಿನ ರೈಲ್ವೆ ಹಳಿಯ ಮೇಲೆ ದುಷ್ಟರು ರಾಡ್ ಹಾಗೂ ಮರದ ದಿಮ್ಮಿ ಇಟ್ಟಿದ್ದರು. ಇನ್ನು ಲೋಕೊ ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಈ ಘಟನೆಯಲ್ಲಿ ಸೋಮಯ್ ಮರಾಂಡಿ, ಭಜನು ಮುರ್ಮು ಹಾಗೂ ದಸಮತ್ ಮರಾಂಡಿ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಓಡಿಶ ಮೂಲದ ಮೂವರು ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.