ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಾಗಿ ಬೈಕ್ ಇಬ್ಬರು ಸ್ಥಳದಲ್ಲಿ ಸಾವು.!
ವಿಜಯಪುರ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಾಗಿ ಬೈಕ್ ಡಿಕ್ಕಿಯಾದ ಪರಿಣಾಮ, ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ವಿಜಯಪುರದ ಹಲಗಬಾಲ್ ಕ್ರಾಸ್ ನಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲಗಬಾಲ್ ಕ್ರಾಸ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಎನ್ನುವಂತೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಗೆ ಹಿಂಬದಿಯಾಗಿ ಬೈಕ್ ಒಂದು ಡಿಕ್ಕಿ ಹೊಡೆದಿದೆ.
ಮೃತರು ತುಂಬಗಿ ಗ್ರಾಮದ ಮೆಹಬೂಬ್(35) ಹಾಗೂ ಹುಸೇನ್ (38) ಎಂಬುವರು ಸಾವನ್ನಪ್ಪಿದ್ದಾರೆ. ಮುದ್ದೇಬಿಹಾಳದಿಂದ ತಮ್ಮ ಊರಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.