ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ – ಆರೋಪಿಗಳ ಬಂಧನ
ಕಾರವಾರ: ರಸ್ತೆ ಬದಿಯಲ್ಲಿದ್ದ ಯುವಕರಿಗೆ ಮನೆಗೆ ತೆರೆಲುವಂತೆ ಪೊಲೀಸರು ಬುದ್ದಿ ಹೇಳಿದಕ್ಕೆ, ಯುವಕರ ಗುಂಪೊಂದು ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರನ್ನು ಥಳಿಸಿದ ಘಟನೆ ಕಾರವಾರದ ಬಂದರು ಪ್ರದೇಶ ಬೈತಖೋಲ್ ದಲ್ಲಿ ನಡದಿದೆ.
ಬೈತಖೋಲ್ ಬೀಟ್ ನಗರ ಠಾಣೆಯ ಪೋಲೀಸರಾದ ಗಣೇಶ ಕುರಿಯವರ್, ಹರೀಶ ಗವಾಣಿಕರ ಇಬ್ಬರೂ ಯುವಕರ ದಾಳಿಗೆ ತುತ್ತಾಗಿ ಗಾಯಗೊಂಡವರು.
ಇಬ್ಬರು ಪೊಲೀಸರು ಬೈತಖೋಲ್ ಏರಿಯಾದಲ್ಲಿ ರಾತ್ರಿ ಹೊತ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಯುವಕರ ತಂಡವೊಂದು ರಾತ್ರಿಯಾದರೂ ಮನೆಗೆ ತೆರಳದೆ, ರಸ್ತೆ ಬದಿಯಲ್ಲಿ ನಿಂತಿದ್ದರು . ಈ ಗುಂಪನ್ನು ಗಮನಿಸಿದ ಪೊಲೀಸರು, ಮನೆಗೆ ಹೋಗುವಂತೆ ಯುವಕರಿಗೆ ಸೂಚನೆ ನೀಡಿದಾಗ ಪೊಲೀಸ್ ಮತ್ತು ಯುವಕರ ನಡುವೆ ಮಾತಿಗೆ ಮಾತು ಬೆಳೆದು ಯುವಕರ ತಂಡವು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಎರಗಿ ಹಲ್ಲೆ ಮಾಡಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಸುನೀಲ ಗೌಡ, ಮಂಜುನಾಥ ಗೌಡ, ಸಂದೇಶ್, ರಘುವೀರ,ನಿತಿನ್ ಗೌಡ, ಗಗನ ಗೌಡ, ಅನುರಾಗ ಗೌಡ, ಉಮೇಶ್ ಜನಕಪ್ರಸಾದ್, ವಿತೇಶ ಗೌಡ, ಯುವರಾಜ ಗೌಡ, ಸುಚಿತ ಗೌಡ ಎಂಬುವವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಲ್ಲೆ ಮಾಡಿದ ಆರೋಪಿತರನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.