‘ಕರ್ನಾಟಕದಲ್ಲಿ ಇಂಧನ ಕೊರತೆ ಆಗದಂತೆ ಕ್ರಮ ವಹಿಸುತ್ತೇವೆ’ – ಸಚಿವ ಕೆಜೆ ಜಾರ್ಜ್
ಹಾಸನ: ಕರ್ನಾಟಕದಲ್ಲಿ ಇಂಧನ ಕೊರತೆ ಆಗದಂತೆ ಮತ್ತು ಎಲ್ಲಾ ರೈತರಿಗೂ ವಿದ್ಯುತ್ ನೀಡಲು ಕ್ರಮ ವಹಿಸುತ್ತೇವೆ ಎಂದು ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕರ್ನಾಟಕದಲ್ಲಿ 34 ಲಕ್ಷ ನೀರಾವರಿ ಪಂಪ್ ಸೆಟ್ ಇವೆ. ಇತ್ತೀಚೆಗೆ ಮಳೆ ಇಲ್ಲದೆ ವಿದ್ಯುತ್ಗೆ ಬೇಡಿಕೆ ಜಾಸ್ತಿ ಆಗಿದೆ. ವಿದ್ಯುತ್ (Electricity) ಥರ್ಮಲ್ ಪವರ್ ಉತ್ಪಾದನೆ ಪ್ರಾರಂಭಿಸಿ ಸದ್ಯ ಕೊರತೆ ಆಗದಂತೆ ಮಾಡಿದ್ದೇವೆ ಎಂದರು.
ಇನ್ನು ಬರೀ ಅರಸೀಕೆರೆ ತಾಲ್ಲೂಕಿನಲ್ಲಿ 24 ಸಾವಿರ ಪಂಪ್ ಸೆಟ್ ಇದ್ದು, ಇದರಲ್ಲಿ 3,932 ರೈತರು ಅಕ್ರಮ ಸಕ್ರಮಕ್ಕಾಗಿ ಅರ್ಜಿ ಹಾಕಿದಾರೆ. ಎಲ್ಲಾ ರೈತರಿಗೂ ವಿದ್ಯುತ್ ನೀಡಲು ಕ್ರಮ ವಹಿಸುತ್ತೇವೆ ಎಂದಿದ್ದಾರೆ.
ಬೇರೆ ಬೇರೆ ರಾಜ್ಯದ ಜೊತೆ ಮಾತನಾಡುತ್ರಿದ್ದೇವೆ. ನಾವು ಈಗ ಪವರ್ ತಗೊಂಡು ಜೂನ್ ಜುಲೈನಲ್ಲಿ ವಾಪಸ್ ಕೊಡೋ ಬಗ್ಗೆ ಚರ್ಚೆ ಆಗುತ್ತಿದೆ. ಇದುವರೆಗೆ ನಾವು ಬೇರೆ ರಾಜ್ಯಕ್ಕೆ ಕೊಡುತ್ತಿದ್ದೆವು ಈಗ ಅದನ್ನ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.