‘ಕರ್ನಾಟಕದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ’ – ಬಿಜೆಪಿ ಟೀಕೆ
ಬೆಂಗಳೂರು:ಕರ್ನಾಟಕದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ. ಮಹಿಳೆಯರನ್ನು ಸುರಕ್ಷಿತವಾಗಿಸಬೇಕಿದ್ದ ಹೊದಿಕೆಯ ತುಂಬಾ ರಂಧ್ರಗಳೇ ತುಂಬಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧಬಿಜೆಪಿ ಟೀಕೆ ಮಾಡಿದೆ.
ಈ ಕುರಿತು ಟ್ವಿಟ್ ಮಾಡಿದ ಬಿಜೆಪಿ, ಕರ್ನಾಟಕವನ್ನು @INCKarnataka ತಾಲಿಬಾನ್ ಅನ್ನಾಗಿಸುತ್ತಿದೆಯೇ? ಎಂದು ಪ್ರಶ್ನಿಸಿದೆ. ಬೆಳಗಾವಿಯ ಒಬ್ಬ ಮಹಿಳೆಯ ಅಮಾನವೀಯ ಕಿರುಕುಳ ಮತ್ತು ದೌರ್ಜನ್ಯ, ಮತ್ತೊಬ್ಬ ಮಹಿಳೆಯ ಮೂಗಿಗೆ ಕತ್ತರಿ, ಈಗ ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ , ಗೃಹಲಕ್ಷ್ಮಿಯರಿಗೆ ಇಂತಹ ಭಾಗ್ಯವೇ? ಎಂದು ಕಿಡಿಕಾರಿದೆ.
ಗಾಂಧಿ ತತ್ವದ ಬಗ್ಗೆ ಭಾಷಣ ಮಾಡುವ ಸಿದ್ದರಾಮಯ್ಯ ಅವರೇ, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸ್ತ್ರೀ ಸ್ವಾತಂತ್ರ್ಯ ಮತ್ತು ಘನತೆಯ ಆದರ್ಶ ನಿಮ್ಮ ನಾಯಕತ್ವದಲ್ಲಿ ಛಿದ್ರ ಛಿದ್ರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ತಾಯಂದಿರ, ಸಹೋದರಿಯರ, ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರಂಟಿ ಇಲ್ಲದಾಗ, ನಿಮ್ಮ ಗ್ಯಾರಂಟಿಗಳು ಇನ್ನೆಷ್ಟು ಯೋಗ್ಯ ಅನಿಸಿಕೊಳ್ಳುತ್ತವೆ? ಎಂದು ಸರ್ಕಾರದ ವಿರುದ್ಧ ಬಿಜೆಪಿ ಅಕ್ರೋಶ ಹೊರಹಾಕಿದೆ.