Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕರ್ನಾಟಕದಿಂದ ಟೋಮೆಟೋ ಖರೀದಿಗೆ ಕೇಂದ್ರ ಸೂಚನೆ

ನವದೆಹಲಿ: ದೇಶದಲ್ಲೆಡೆ ಟೊಮೆಟೋ ದರ ಏರಿಕೆಯಾಗಿದೆ. ಕೆ.ಜಿಗೆ 150 ರೂ ದಾಟಿದಂತೆ ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳಲು ಮುಂದಾಗಿದೆ.

ಹೆಚ್ಚು ಟೊಮೆಟೋ ಬೆಳೆಯುವ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಬೆಳೆ ಖರೀದಿಸಿ ವಿತರಿಸುವ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ , ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟಗಳಿಗೆ ಕೇಂದ್ರ ಸೂಚನೆ ನೀಡಿದೆ.

ಈ ಹಿನ್ನಲೆ ಗಗನಕ್ಕೇರಿರುವ ಟೊಮೆಟೋ ದರ ಇಳಿಕೆಯಾಗುವ ಸಾಧ್ಯತೆ ಇದೆ. ಜು.14 ಅನ್ವಯವಾಗುವಂತೆ ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ದ ವ್ಯಾಪ್ತಿಯಲ್ಲಿ ಎನ್‌ಸಿಸಿಎಫ್ ಮತ್ತು ನಾಫೆಡ್‌ ವತಿಯಿಂದ ಟೊಮೆಟೋವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಬಗ್ಗೆ ಕೇಂದ್ರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.

ಯಾವ ಭಾಗದಲ್ಲಿ ಹೆಚ್ಚು ಬೇಡಿಕೆ ಇದೆ ಅದರ ಆಧಾರದಲ್ಲಿ ಟೊಮೆಟೋ ಪೂರೈಸಬೇಕು ಎಂಬ ವಿಚಾರವನ್ನೂ ಗುರುತಿಸಲಾಗಿದ್ದು, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರದ ಸತಾರಾ, ನಾರಾಯಣಗಾಂವ್‌ ಮತ್ತು ನಾಸಿಕ್‌, ಆಂಧ್ರಪ್ರದೇಶದದಿಂದ ಹೆಚ್ಚಿನ ಪ್ರಮಾಣದಲ್ಲಿ ಟೋಮೋಟೋ ಪೂರೈಕೆಯಾಗುತ್ತದೆ. ಇನ್ನು ದಿಲ್ಲಿ ಮತ್ತು ಎನ್‌ಸಿಆರ್‌ಗೆ ಕರ್ನಾಟಕದ ಕೋಲಾರ, ಹಿಮಾಚಲ ಪ್ರದೇಶದಿಂದ ಟೊಮೆಟೋ ಪೂರೈಕೆಯಾಗುತ್ತದೆ.

ಹೀಗಾಗಿ ನಾಸಿಕ್‌ನಿಂದ ಹೊಸ ಬೆಳೆ ಪೂರೈಕೆಯಾಗಲಿದೆ. ಮುಂದಿನ ತಿಂಗಳು ನಾರಾಯಣಗಾಂವ್‌, ಔರಂಗಾಬಾದ್‌, ಮಧ್ಯಪ್ರದೇಶಗಳಿಂದ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಾಗುವ ವಿಶ್ವಾಸವನ್ನುಸರಕಾರದ ಮೂಡಿಸಿದೆ.