Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕರ್ನಾಟಕದ ಮತದಾರರ ಅಂತಿಮ ಪಟ್ಟಿ-2024 ಪ್ರಕಟ

ಬೆಂಗಳೂರು: ಕರ್ನಾಟಕದ ಮತದಾರರ ಅಂತಿಮ ಪಟ್ಟಿ-2024 ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಒಟ್ಟು 5.37 ಕೋಟಿ ಮತದಾರರು ಇದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.

ನಗರದದ ಶೇಷಾದ್ರಿ ರಸ್ತೆಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕದ ಮತದಾರರ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಿ ಮಾಹಿತಿ ನೀಡಿದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಕರಡು ಮತದಾರರ ಪಟ್ಟಿ -2024 ರ ಪ್ರಕಾರ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,33,77,162 ಆಗಿದ್ದು, ಇದರಲ್ಲಿ 2,68,02,838 ಪುರುಷ ಮತದಾರರು, 2,65,69,428 ಮಹಿಳಾ ಮತದಾರರು ಮತ್ತು 4,896 ಇತರೆ ಮತದಾರರು ಸೇರಿದ್ದಾರೆ ಎಂದರು.

ಇನ್ನು ಅಂತಿಮ ಮತದಾರರ ಪಟ್ಟಿ-2024 ರಲ್ಲಿ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,37,85,815 ಹೆಚ್ಚಳವಾಗಿದ್ದು, ಇದರಲ್ಲಿ 2,69,33,750 ಪುರುಷ ಮತದಾರರು, 2,68,47,145 ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.