Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕರ್ನಾಟಕದ ಸೇರಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಶಂಕು ಸ್ಥಾಪನೆ

ನವದೆಹಲಿ: ಅಮೃತ್ ಭಾರತ್ ಸ್ಟೇಷನ್​ ಯೋಜನೆಯಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಈ ಪುನರಾಭಿವೃದ್ಧಿ ಕಾರ್ಯವನ್ನು ಮಾಡಲಾಗುತ್ತದೆ. ರಾಜ್ಯದ 13 ನಿಲ್ದಾಣಗಳ ಮೇಲ್ದರ್ಜೆಗೇರಿರುವ ಕಾಮಗಾರಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. 24 ಸಾವಿರ ಕೋಟಿ ವೆಚ್ಚದಲ್ಲಿ ದೇಶದ 508 ನಿಲ್ದಾಣಗಳು ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು ಮೂಲ ಸೌಕರ್ಯಗಳ ಅಭಿವೃದ್ಧಿ, ಮಹಾನಗರಗಳೊಂದಿಗೆ ಸಂಪರ್ಕ, ಚಿಲ್ಲರೆ ಮಾರಾಟ ಮಳಿಗೆ, ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಮಳಿಗೆ ಸ್ಥಾಪನೆ ಮಾಡಲಾಗುತ್ತದೆ.

ಈ ಯೋಜನೆಯು ವಾರ್ಷಿಕವಾಗಿ ರೂ 20 ಕೋಟಿಯಿಂದ ರೂ 500 ಕೋಟಿಗಳ ನಡುವಿನ ನಿಲ್ದಾಣಗಳು, ಪ್ರವಾಸಿ ಮತ್ತು ತೀರ್ಥಯಾತ್ರೆಯ ಪ್ರಾಮುಖ್ಯತೆಯನ್ನು ಹೊಂದಿರುವ ನಿಲ್ದಾಣಗಳು ಮತ್ತು ಸ್ಥಳೀಯ ಪ್ರಾಮುಖ್ಯತೆಯನ್ನು ಹೊಂದಿರುವ ನಿಲ್ದಾಣಗಳನ್ನು ಒಳಗೊಂಡಿದೆ.