Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1.24ಲಕ್ಷ ರೂ. ಜಮೆ’- ರಾಹುಲ್ ಗಾಂಧಿ

ಮಂಡ್ಯ :ಕೇಂದ್ರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1.24ಲಕ್ಷ ರೂ. ಜಮೆ ಮಾಡುವ ಗ್ಯಾರಂಟಿಯನ್ನು ರಾಹುಲ್ ಗಾಂಧಿ ನೀಡಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ 24 ಸಾವಿರದ ಜೊತೆಗೆ ಕೇಂದ್ರದಿಂದ ವರ್ಷಕ್ಕೆ 1.24 ಲಕ್ಷ ರೂ. ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು ಎಂದರು.ಜೊತೆಗೆ ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿಯನ್ನು ಇದೇ ವೇಳೆ ರಾಹುಲ್‌ ಘೋಷಿಸಿದ್ದಾರೆ.

ಮೊದಲು ಯುವಕರಿಗೆ ಉದ್ಯೋಗ ಯೋಜನೆ ಜಾರಿ ಮಾಡುತ್ತೇವೆ. . ನರೇಗಾ ಯೋಜನೆಯನ್ನ ನಗರ ಪ್ರದೇಶಕ್ಕೆ ವಿಸ್ತರಿಸುತ್ತೇವೆ. ಆಶಾ ಕಾರ್ಯತರ್ಕರಿಗೆ ಸಂಭಾವನೆ ಹೆಚ್ಚಸಲಿದ್ದೇವೆ. ಗುತ್ತಿಗೆ ಪದ್ದತೆಯನ್ನ ರದ್ದು ಮಾಡುತ್ತೇವೆ. ಉದ್ಯೋಗ ಗ್ಯಾರೆಂಟಿ ಕಾಯಂ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಚುನಾವಣಾ ಬಾಂಡ್ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಈ ಕುರಿತು ಮಾತನಾಡುವಾಗ ಅವರ ಕೈ ನಡುಗುತ್ತದೆ. ಇದೊಂದು ದೊಡ್ಡ ಹಗರಣವಾಗಿದೆ. ಎಲ್ಲಾ ಮಾಹಿತಿಯನ್ನ ನಿಗೂಢವಾಗಿ ಇಟ್ಟಿದ್ದಾರೆ. ಕೋರ್ಟ್ ಇವರಿಗೆ ಛೀಮಾರಿ ಹಾಕಿದೆ. ಮಾಹಿತಿ ಬಹಿರಂಗ ಪಡಿಸಬೇಕು ಅಂತ ಹೇಳಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಒಂದು ಕಡೆಯಾದರೆ ಬಿಜೆಪಿ ಬಿ ಟೀಂ ಮತ್ತೊಂದು ಕಡೆ. ಈಗ ಎರಡು ಸೇರಿ ಒಂದಾಗಿವೆ ಅವರನ್ನ ಸೋಲಿಸಬೇಕು. ಎಲ್ಲಾ ನಮ್ಮ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಪಕ್ಷದ ಸಿಪಾಯಿಗಳಿಂದ ನಮಗೆ ಬೆಂಬಲ ನೀಡಬೇಕು ಎಂದು ನುಡಿದರು.