Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕಾಂಗ್ರೆಸ್ ನಾಯಕರು ಮಾತ್ರ ದೇಶಕ್ಕೆ ಏನೇ ಒಳ್ಳೆದಾದರೂ ಸಹಿಸಲ್ಲ’ – ಪ್ರಲ್ಹಾದ ಜೋಶಿ

ಧಾರವಾಡ: ಇಂದು ಇಡೀ ಜಗತ್ತು ಭಾರತವನ್ನು ಹೊಗಳುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ದೇಶಕ್ಕೆ ಏನೇ ಒಳ್ಳೆದಾದರೂ ಸಹಿಸಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಇಡೀ ಜಗತ್ತು ಭಾರತದ ನೇತೃತ್ವವನ್ನು ಶ್ಲಾಘಿಸುತ್ತಿರುವಾಗ ಜಿ20 ಶೃಂಗಸಭೆ ನಡೆಯುತ್ತಿದ್ದ ಸ್ಥಳದ ಹೊರಭಾಗದಲ್ಲಿ ಮಳೆ ನೀರು ನಿಂತಿರುವ ಫೋಟೋ ಟ್ವೀಟ್ ಮಾಡಿ ರಾಹುಲ್ ಗಾಂಧಿ ದೇಶದ ಬಗ್ಗೆ ಅಪಪ್ರಚಾರ ಮಾಡಲು ಯತ್ನಿಸಿದ್ದಾರೆ‌. ಇದು ಅವರ ಮಾನಸಿಕ ದಾರಿದ್ರ್ಯಕ್ಕೆ ಸಾಕ್ಷಿ ಎಂದರು.

ಇನ್ನು ಚೀನಾ, ರಷ್ಯಾದ ವಿದೇಶಾಂಗ ಸಚಿವರು ಸೇರಿದಂತೆ ಜಿ20ಯ ಎಲ್ಲಾ ರಾಷ್ಟ್ರಗಳ ಪ್ರಮುಖರು ಭಾರತದ ಎಲ್ಲಾ ಸಲಹೆಗಳನ್ನು ಮಾನ್ಯ ಮಾಡಿದ್ದು, ಇದರೊಂದಿಗೆ ಜಿ20 ಶೃಂಗಸಭೆ ಅಚ್ಚುಕ್ಕಟ್ಟಾಗಿ ನಡೆದಿದೆ. ಮೊಸರಲ್ಲಿ ಕಲ್ಲು ಹುಡುಕುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಜೈರಾಂ ರಮೇಶ್ ಅವರು ಜಿ20 ಶೃಂಗಸಭೆ ನಡೆಯುತ್ತಿದ್ದ ಪ್ರದೇಶದ ಹೊರಗೆ ಮಳೆಯಿಂದ ನಿಂತಿರುವ ನೀರಿನ ಫೋಟೋ ತೆಗೆದು ಟ್ವೀಟ್ ಮಾಡಿ ಸಣ್ಣತನ ತೋರಿದ್ದಾರೆ ಎಂದು ವಾಗ್ದಾಳಿ ನಡೆದಿದ್ದಾರೆ.