Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರ್ಪಡೆಗೆ ಪಕ್ಷಗಳು ನಿರ್ಲಕ್ಷ.!ಲೋಕಸಭೆ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ.!

 

ಚಿತ್ರದುರ್ಗ : ರಾಜ್ಯ ಸರ್ಕಾರ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವಂತೆ ಕಳೆದ 2014ರಲ್ಲಿ ಶಿಫಾರಸ್ಸು ಮಾಡಿತ್ತು ಆದರೆ ಕೇಂದ್ರ ಸರ್ಕಾರ 10 ವರ್ಷ ಕಳೆದರೂ ಸಹಾ ಅದನ್ನು ಜಾರಿ ಮಾಡಿಲ್ಲ ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ ಮಾಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಡುಗೊಲ್ಲರು ತಮ್ಮ ಶಕ್ತಿಯನ್ನು ಬಿಜೆಪಿ ವಿರುದ್ದ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಕಾಡುಗೊಲ್ಲ ಕ್ಷೇಮಾಭೀವೃದ್ದಿ ಸಂಘದ ರಾಜ್ಯಾಧ್ಯಕ್ಷರಾದ ಶಿವುಯಾದವ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವಂತೆ ಅನ್ನಪೂರ್ಣಮ್ಮ ವರದಿಯನ್ನು ನೀಡಿತ್ತು ಅದರಂತೆ ಕುಲಶಾಸ್ತ್ರಿ ಅಧ್ಯಯನವೂ ಸಹಾ ಆಗಿತ್ತು ಕಾಡುಗೊಲ್ಲ ಜನಾಂಗ ಎಸ್.ಟಿ.ಗೆ ಸೇರ್ಪಡೆಯಾಗುವ ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿದೆ ಆದರೆ ಕೇಂದ್ರ ಸರ್ಕಾರವು ಕಾಡುಗೊಲ್ಲ ಜನಾಂಗವನ್ನು ಎಸ್,ಟಿ.ಗೆ ಸೇರಿಸುವುದಾಗಿ ಭರವಸೆಯನ್ನು ನೀಡಿತ್ತು ಆದರೆ ಅದನ್ನು ಇದುವರೆವಿಗೂ ಈಡೇರಿಸಿಲ್ಲ ಈಗ ಕೇಂದ್ರ ಸರ್ಕಾರದ ಅವಧಿ ಮುಗಿಯುತ್ತಾ ಬಂದಿದೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದೇ ಇದ್ದಲ್ಲದೆ ಈಗ ಅಧಿವೇಶನ ನಡೆಯುತ್ತಿದೆ ಈ ಸಮಯದಲ್ಲಿ ಕಾಡುಗೊಲ್ಲರ ಬಗ್ಗೆ ಸಂಸತ್ನಲ್ಲಿ ಚರ್ಚೆಯಾಗಿ ನಮ್ಮನ್ನು ಎಸ್.ಟಿ.ಗೆ ಸೇರ್ಪಡೆಯಾಗುವಂತೆ ಮಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ ಎಂದರು.

ಕಳೆದ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ನಮ್ಮ ಜನಾಂಗವನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವುದಾಗಿ ಭರವಸೆಯನ್ನು ನೀಡಿತ್ತು ಇದರಂತೆ ರಾಜ್ಯ ಸರ್ಕಾರವೂ ಸಹಾ 2014ರಲ್ಲಿಯೇ ಕಾಡುಗೊಲ್ಲ ಜನಾಂಗವನ್ನು ಎಸ್.ಟಿ.ಗೆ ಸೇರಿಸುವಂತೆ ಶಿಫಾರಸ್ಸು ಮಾಡಿತ್ತು ಆದರೆ ಕೇಂದ್ರ ಸರ್ಕಾರಕ್ಕೆ ಹೋದ ಫೈಲು ಒಂದು ಇಂಚು ಸಹಾ ಸರಿದಿಲ್ಲ ಎಲ್ಲಿ ಇದೇಯೇ ಅಲ್ಲಿಯೇ ಇದೆ ಇದರ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಮಂತ್ರಿಗಳಿಗೆ ಮನವಿಯನ್ನು ಸಹ ಮಾಡಲಾಗಿತ್ತಾದರೂ ಏನು ಪ್ರಯೋಜನವಾಗಿಲ್ಲ ಎಂದ ಅವರು,  ಈಗ ಕೇಂದ್ರ ಸರ್ಕಾರದ ಅಧಿವೇಶನ ನಡೆಯುತ್ತಿದೆ, ಇದರಲ್ಲಿ ನಮ್ಮ ಜನಾಂಗದವರನ್ನು ಎಸ್.ಟಿ.ಗೆ ಸೇರಿಸುವ ಬಗ್ಗೆ ಚರ್ಚೆ ನಡೆದು ಸೇರಿಸುವ ಕಾರ್ಯವನ್ನು ಮಾಡಬೇಕಿದೆ ಇಲ್ಲವಾದಲ್ಲಿ ಕಳೆದ ವಿಧಾನಸಭೆಯಲ್ಲಿ ಕಾಡುಗೊಲ್ಲರು ಬಿಜೆಪಿಯ ಬಗ್ಗೆ ತೆಗೆದುಕೊಂಡ ನಿರ್ಣಯವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಗೆದುಕೊಳ್ಳಲಾಗುವುದು ಈ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರ ಇದಕ್ಕೆ ಆಸ್ಪಂದ ನೀಡದೇ ಈ ಅಧಿವೇಶನದಲ್ಲಿ ನಮ್ಮ ಜನಾಂಗದ ಬಗ್ಗೆ ನಿರ್ಣಯವನ್ನು ಮಾಡಿ ಎಸ್.ಟಿ.ಗೆ ಸೇರಿಸುವ ಕಾರ್ಯವನ್ನು ಮಾಡಬೇಕು ಎಂದು ಶಿವುಯಾದವ್ ಒತ್ತಾಯಿಸಿದರು.

ಚಿತ್ರದುರ್ಗ ಕ್ಷೇತ್ರದ ಸಂಸದರು ಸಚಿವರಾದ ನಾರಾಯಣಸ್ವಾಮಿಯವರು ಇದರ ಬಗ್ಗೆ ಐಆವ ಮಾತನ್ನು ಸಹಾ ಆಡುತ್ತಿಲ್ಲ, ನಮ್ಮ ಜನಾಂಗವನ್ನು ಎಸ್.ಟಿ.ಗೆ ಸೇರಿಸುವಂತೆ ಮನವಿಯನ್ನು ಮಾಡಲಾಗಿತ್ತು ಆದರೆ ಅವರು ಇದರುವರೆವಿಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಇದರ ಬಗ್ಗೆ ಅಧಿವೇಶನದಲ್ಲಿಯೂ ಸಹಾ ಮಾತನಾಡಿಲ್ಲ ಎಂದು ಸಚಿವರ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ ಶಿವುಯಾದವ್,  ಬಿಜೆಪಿ ಈ ಬಾರಿಯ ಅಧಿವೇಶನದಲ್ಲಿ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತಗಳನ್ನು ಕೇಳಲು ಹಟ್ಟಿಗಳ ಬಳಿ ಯಾವ ಮುಖಂಡರು ಬರಬೇಡಿ ಎಂದು ಕಟುವಾಗಿ ಹೇಳಿದರು.

ಗೋಷ್ಟಿಯಲ್ಲಿ ಕಾಡುಗೊಲ್ಲ ಕ್ಷೇಮಾಭೀವೃದ್ದಿ ಸಂಘದ ಜಿಲ್ಲಾಧ್ಯಕ್ಷರಾದ ಶಿವಣ್ಣ, ಕಾರ್ಯಧ್ಯಕ್ಷರಾದ ಕದರಪ್ಪ, ಉಪಾಧ್ಯಕ್ಷರಾದ ತಿಮ್ಮೇಶ್, ಜಗದೀಶ್, ಹರೀಶ್ ಭಾಗವಹಿಸಿದ್ದರು.