ಕಾಫಿ ಸೇವನೆಯಿಂದ ಕಾಯಿಲೆ ಅಭಾವ?
ಕಾಫಿಯನ್ನು ಕುಡಿಯುವುದರ ಲಾಭ ಅರಿತಿದ್ದೀರಾ? ಏಕೆಂದರೆ ಕಾಫಿಯೂ ಆಯುಷ್ಯವನ್ನು ಹೆಚ್ಚಿಸುತ್ತದೆ.
ಹೌದು, ಈ ಅಂಶವು ಅಧ್ಯಾಯನದಿಂದ ತಿಳಿದುಬಂದಿದ್ದು, ಕಾಫಿ ಸೇವನೆಯಿಂದ ಹೃದಯ ರಕ್ತನಾಳ ಕಾಯಿಲೆಗಳು ,ಕ್ಯಾನ್ಸರ್ ಮತ್ತು ಶ್ವಾಸಕೋಶಗಳ ಸಮಸ್ಯೆಯಲ್ಲಿ ಸಾವನಪ್ಪುತ್ತಿರುವವರ ಸಂಖ್ಯೆಯಲ್ಲಿ ಕ್ರಮವಾಗಿ ಶೇಕಡ 20 ಶೇಕಡ 50 ಹಾಗೂ ಶೇಕಡ 40ರಷ್ಟು ಕಡಿಮೆಯಾಗಿದೆ. ಇದರಿಂದ ಪಾಶ್ವ ವಾಯು ಕೋಲೊರೆಕ್ಟರ್ ಕ್ಯಾನ್ಸರ್, ಮತ್ತು ಸ್ತನ ಕ್ಯಾನ್ಸರ್ ಸಮಸ್ಯೆ ಕೂಡ ಕ್ಷೀಣಿಸಲಿದೆ.
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಯಕೃತ್ತು, ಕೊಲೊನ್ ಕ್ಯಾನ್ಸರ್ನಂತಹ ಕೆಲವು ಕ್ಯಾನ್ಸರ್ಗಳ ಅಭಿವೃದ್ಧಿಯ ಅಪಾಯವನ್ನು ಕಡಿಮೆ ಕಾಫಿ ಸಹಾಯ ಮಾಡುತ್ತದೆ. ಕಾಫಿಯಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ ನಿಜ. ಆದರೆ ಅತಿಯಾದರೆ ಅಮೃತವೂ ವಿಷ.