Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಾಯಕ ಸಮುದಾಯದ ಬಗ್ಗೆ ಕಿಂಚಿತ್ತೂ ಸೌಜನ್ಯವಿಲ್ಲದ ಸರ್ಕಾರ, ರಾಜಕಾರಣಿಗಳು

 

ದಾವಣಗೆರೆ: ಸಮಾಜದ ಎಲ್ಲಾ ಸಮುದಾಯದ ಬಟ್ಟೆಗಳನ್ನು ಶುಭ್ರಗೊಳಿಸುವ ಮಡಿವಾಳ ಸಮುದಾಯದ ಬಗ್ಗೆ ಸರ್ಕಾರಗಳು, ರಾಜಕಾರಣಿಗಳು ಕೇವಲ ಓಟಿಗಾಗಿ, ಚಪ್ಪಾಳೆಗಾಗಿ ಓಲೈಸುವ ಮಾತುಗಳನ್ನು ಆಡುತ್ತಿವೆಯೇ ಹೊರತು, ನಮ್ಮ ಸಮುದಾಯದ ಏಳಿಗೆ, ಕಾಯಕಕ್ಕೆ ಮೌಲ್ಯ ನೀಡುವ, ಕುಂದುಕೊರತೆಗಳನ್ನು ಬಗೆಹರಿಸುವ ಕಿಂಚಿತ್ತೂ ಸೌಜನ್ಯದ ಮನಸ್ಸುಗಳು ಇವತ್ತಿನ ಸರ್ಕಾರ, ರಾಜಕಾರಣಿಗಳಿಗೆ ಇಲ್ಲದಂತಾಗಿದೆ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದರು.

ನಗರದ ಹೊರವಲಯದಲ್ಲಿ ರಾಷ್ಟಿçÃಯ ಹೆದ್ಧಾರಿ 48ರಲ್ಲಿನ ಜಿಲ್ಲಾ ಪಂಚಾಯತಿ ಎದುರು ಇರುವ ಮಡಿಕಟ್ಟೆಯಲ್ಲಿ ಮಡಿಕಟ್ಟೆ (ಧೋಬಿಘಾಟ್) ವೃತ್ತಿಪರ ಮಡಿವಾಳರ ಸಂಘ, ದಾವಣಗೆರೆ, ಶ್ರೀ ಮಡಿವಾಳ ಮಾಚಿದೇವ ಜಿಲ್ಲಾ ಸಂಘ, ಜಿಲ್ಲಾ ಮಹಿಳಾ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ 14ನೇ ವರ್ಷದ ಶ್ರೀ ಬನ್ನಿ ಮಹಾಂಕಾಳಿದೇವಿಯ ದಸರಾ ಹಬ್ಬದ ಪೂಜಾ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಮೇಲ್ವರ್ಗದ ಸಮುದಾಯಗಳು ಈಗಲೂ ನಮ್ಮನ್ನು ಕೀಳಾಗಿ ನೋಡುತ್ತವೆ. ಮಂದಿನ ಪೀಳಿಗೆಯ ಸ್ಥಿತಿ ಗಮನಿಸಿದರೆ ಅಘಾತ ಎನ್ನಿಸುತ್ತದೆ. ಕಾಯಕ ಮಾಡುವ ಸಮುದಾಯಗಳು ಹಿಂದೆ ಉಳಿಯುವಂತ ಸ್ಥಿತಿ ಇದೆ. ಯಾವುದೇ ಸರ್ಕಾರಗಳು, ಜನಪ್ರತಿನಿಧಿಗಳು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿಲ್ಲ. ನಾವೇ ಜಾಗೃತರಾಗಿ ಎಲ್ಲರೂ ಒಟ್ಟಾಗಿ ಮುಂದುವರೆಬೇಕು. ಸಮುದಾಯವನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಮಾನಸಿಕವಾಗಿ ಸಿದ್ದರಾಗಿರಬೇಕು ಎಂದು ಕರೆ ನೀಡಿದರು.

ನಮಗೂ ಮುಂದುವರೆದಿರುವ ಸಮುದಾಯಗಳಿಗೂ, ಶ್ರೀಮಂತ ವರ್ಗಕ್ಕೆ ನಮಗೂ 100 ವರ್ಷಗಳ ಅಂತರವಿದೆ. ಉತ್ತಮ ಬಟ್ಟೆ, ಸಮಾಧಾನ ಹೊಂದಿದ್ದೇವೆ. ಆದರೆ, ನಾವಿನ್ನೂ ಶೋಚನೀಯ ಪರಿಸ್ಥಿತಿಯಲ್ಲಿ ಇದ್ದೇವೆ. ಇತ್ತೀಚೆಗೆ ನಮಗೆ ತಿಳುವಳಿಕೆ, ಅರಿವು, ಜ್ಞಾನ ಬಂದಿದೆ. ಆದರೂ ಅದಕ್ಕೆ ಒಂದು ಸವಾಲಿದೆ. ನಮಗಿಂತ ನಮ್ಮ ಮುಂದಿನ ಪೀಳಿಗೆ ಉತ್ತಮವಾಗಿ ಇರಬೇಕೆಂದು ಸಂಕಲ್ಪ ಮಾಡಿಕೊಳ್ಳುವ ಬದ್ದತೆ ಇದೆ. ನಮ್ಮ ಮಕ್ಕಳು ಉತ್ತಮ ಸ್ಥಿತಿಗೆ ಬಂದು ಉನ್ನತ ಹುದ್ದೆಗಳನ್ನ ಅಲಂಕರಿಸಬೇಕು. ಆರ್ಥಿಕ ಬದಲಾವಣೆಯ ಮೂಲಕ ಸಮುದಾಯ ಕಟ್ಟುವುದು ಸುಳ್ಳು, ಸ್ಫೂರ್ತಿದಾಯಕ ಮಾತುಗಳು ಶೋಷಿತರಿಗೆ ಶಕ್ತಿ ತುಂಬುತ್ತದೆ ಎಂದರು.

ಮಡಿಕಟ್ಟೆಯೆAದರೆ ದೇವಸ್ಥಾನ ಇದ್ದಂತೆ, ಕುಲಗುರುಗಳು ಇರುವ ವಾಸಸ್ಥಾನ, ನಮ್ಮ ಕಾಯಕ ಮಾಡುವ ವೇಳೆ ಪರಿಶುದ್ದವಾಗಿ ಇರಬೇಕು. ಮಡಿಕಟ್ಟೆ ಮಡಿಯ ದೇವಾಲಯ ಆಗಬೇಕು. ದುಶ್ಚಟಗಳ ತಾಣವಾಗಬಾರದು. ಕಾಯಕ ಮಾಡುವವರೇ ಸಮುದಾಯದ ಶಕ್ತಿ. ಮುಂಬರುವ ಜನವರಿ 5, 6ಕ್ಕೆ ಚಿತ್ರದುರ್ಗದಲ್ಲಿ ಕಾಯಕ ಜನೋತ್ಸವ ನಡೆಯಲಿದ್ದು, ರಾಜ್ಯದ ಪ್ರಮುಖರು, ಮುಖ್ಯಸ್ಥರು ಬರಲಿದ್ದಾರೆ. ಪರಿಶಿಷ್ಠ ಜಾತಿಗೆ ಸೇರ್ಪಡೆ, ಸಮುದಾಯದ ಜಾಗೃತಿ ಮಾಡಲಾಗುವುದು. ನಂತರ ಎಲ್ಲಾ ಜಿಲ್ಲೆಗಳಲ್ಲಿ ಮತ್ತೆ ಹೋರಾಟ, ಪ್ರತಿಭಟನೆ ಮಾಡಲಾಗುವುದು. ಅದಕ್ಕೂ ಮುನ್ನ ಸಿಎಂ ಬಳಿಗೆ ನಿಯೋಗ ಹೋಗಲಾಗುವುದು ಎಂದರು.

ಸAಸದ ಡಾ.ಜಿ.ಎಂ.ಸಿದ್ಧೇಶ್ವರ್ ಮಾತನಾಡಿ, ಎಲ್ಲಾ ಕಾಯಕ ಸಮುದಾಯಗಳ ಜೊತೆ ಮಡಿವಾಳ ಸಮುದಾಯ ಚಿಕ್ಕ ಸಮುದಾಯ. ಎಲ್ಲಾ ಸಮುದಾಯಕ್ಕೆ ಶುಭ್ರವಾದ ಬಟ್ಟೆಗಳನ್ನು ಮಾಡಿಕೊಡುವ ಸಮುದಾಯ ನಿಮ್ಮದು. ಎಲ್ಲ ಸಮುದಾಯಗಳಿಗೆ ಬೇಕು. ನಿಮ್ಮ ಸಮುದಾಯ ಇಲ್ಲದಿದ್ದರೆ ನಾವುಗಳು ಎಷ್ಟು ದಿನಕ್ಕೊಮ್ಮೆ ಬಟ್ಟೆ ಒಗೆಯತ್ತಿದ್ದೆವೋ ಗೊತ್ತಿಲ್ಲ. ನಾವೆಲ್ಲಾ ಇಷ್ಟು ಶುಭ್ರವಾಗಿ, ವಾಸನೆ ರಹಿತವಾಗಿ ಇರುತ್ತಿದ್ದೇವೆ ಎಂದರೆ ಅದಕ್ಕೆ ಮಡಿವಾಳ ಸಮುದಾಯವೇ ಕಾರಣ, ಸಮಾಜಕ್ಕೆ ಮುಂದುವರೆಯಬೇಕಾದರೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇAದ್ರಪ್ಪ ಮಾತನಾಡಿ, ಕಾಯಕ ಸಮುದಾಯವಾದ ಮಡಿವಾಳ ಸಮುದಾಯವು ನಮಗೆ ಬೇಕಾದ ಹಕ್ಕುಗಳನ್ನು ಪಡೆಯಲು ಹೋರಾಟದ ಅಗತ್ಯವಿದೆ. ಪರಿಶಿಷ್ಠ ಜಾತಿಗೆ ಸೇರ್ಪಡೆ, ಉಚಿತ ವಿದ್ಯುತ್ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಜೈಲು ಸೇರಿದರೂ ಸಹ ಸವಲತ್ತುಗಳನ್ನು ಪಡೆಯಬೇಕು. ಸರ್ಕಾರಗಳಿಗೆ ಕಿವಿ ಕೇಳುತ್ತಿಲ್ಲ. ಶ್ರೀಗಳು ಹೋರಾಟಕ್ಕೆ ಕರೆದರೆ ಎಲ್ಲರೂ ಪಾಲ್ಗೊಳ್ಳುವ ಮೂಲಕ ಹೋರಾಟ ಯಶಸ್ವಿ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕಟ್ಟೆ ವೃತ್ತಿಪರ ಮಡಿವಾಳ ಸಂಘದ ಅಧ್ಯಕ್ಷ ಜಿ.ಕಿಶೋರ್‌ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಆರ್.ಮಲ್ಲೇಶಪ್ಪ, ಎಂ.ಎನ್.ಶಿವಮೂರ್ತಪ್ಪ, ಡೈಮಂಡ್ ಮಂಜುನಾಥ್, ಜಿ.ವಿಜಯ್‌ಕುಮಾರ್, ನಾಗಮ್ಮ ಇದ್ದರು. ಪತ್ರಕರ್ತ ಎಂ.ವೈ.ಸತೀಶ್, ಮಡಿಕಟ್ಟೆಯ ಆರ್.ಎಂ.ರವಿ, ಬಿ.ಬಸವರಾಜು, ಹೆಚ್.ಫಕ್ಕೀರಪ್ಪ, ಹನುಮಂತಪ್ಪ, ಹೆಚ್.ಪ್ರವೀಣ್, ಎಸ್.ನಿಂಗರಾಜ್, ಎಂ.ಅಡಿವೆಪ್ಪ, ಎಂ.ವೈ.ರಮೇಶ್, ಪಿ.ಗುತ್ತೆಪ್ಪ, ಡೈಮಂಡ್ ಮಾಲತೇಶ್, ಹೆಚ್.ಮಂಜುನಾಥ್, ಹೆಚ್.ಶಂಕರ್, ಎಸ್.ಅಜೇಯ್, ಸಚೀನ್, ರಾಹುಲ್, ಎಂ.ವೈ.ಕೃಷ್ಣಮೂರ್ತಿ, ಸಿದೇಶ್, ನಾಗಲಿಂಗ, ಮಡಿವಾಳಪ್ಪ, ಆರ್.ಎಂ.ನಾಗರಾಜ್, ಟಿ.ಪ್ರತಾಪ್ ಇದ್ದರು.