Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಾರು – ಈಚರ್ ನಡುವೆ ಭೀಕರ ಅಪಘಾತ: ಸಜೀವ ದಹನವಾದ ಚಾಲಕ

ಚಾಮರಾಜನಗರ: ಕಾರು ಹಾಗೂ ಈಚರ್ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸಜೀವ ದಹನವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.

ಪುತ್ತೂರು: ಅಪಘಾತದಲ್ಲಿ ಪುತ್ರ ಗಂಭೀರ – ಮನನೊಂದು ತಾಯಿ ಆತ್ಮಹತ್ಯೆ

ಮೃತ ಚಾಲಕನನ್ನು ಮೈಸೂರು ಮೂಲದ ಮುಜಾಮಿಲ್ ಅಹಮದ್ ಮೃತ ಚಾಲಕ ಎಂದು ಗುರುತಿಸಲಾಗಿದೆ. ಈಚರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಗುಂಡ್ಲುಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಈಚರ್ ಹಿರಿಕಾಟಿ ಗೇಟ್ ಬಳಿ ಮುಖಾಮುಖಿ‌ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರಿ‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈಚರ್ನಲ್ಲಿದ್ದವರು ಹೊರಕ್ಕೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಈಚರ್ ವಾಹನದ ಮುಂಭಾಗ ಸುಟ್ಟು ಕರಕಲಾಗಿದೆ.