Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಾಶ್ಮೀರದಲ್ಲಿ ಸೇನೆ ಮತ್ತು ಉಗ್ರರ ನಡುವೆ ನಿಲ್ಲದ ಗುಂಡಿನ ಚಕಮಕಿ: ಓರ್ವ ಯೋಧ ನಾಪತ್ತೆ

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೇನೆ ಮತ್ತು ಉಗ್ರ ನಡುವೆ ಗುಂಡಿ ಚಕಮಕಿ ಮುಂದುವರಿದೆ. ಭಯೋತ್ಪಾದಕರ ಎನ್‌ ಕೌಂಟರ್‌ ನಲ್ಲಿ ಯೋಧನೊಬ್ಬ ನಾಪತ್ತೆಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೋಕರ್‌ ನಾಗ್‌ ನ ದಟ್ಟ ಅರಣ್ಯದಲ್ಲಿ ಭಯೋತ್ಪಾದಕರನ್ನು ನಿಗ್ರಹಿಸಲು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಬುಧವಾರದಿಂದ ಗುಂಡಿನ ಚಕಮಕಿ ನಡೆಯುತ್ತಿದೆ.

ಕಾರ್ಯಾಚರಣೆಗಳಲ್ಲಿ ಸ್ಟ್ರೈಕ್-ಸಾಮರ್ಥ್ಯ ಹೆರಾನ್ ಡ್ರೋನ್‌ಗಳು ಸೇರಿದಂತೆ ಹೊಸ ತಲೆಮಾರಿನ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳನ್ನು ಬಳಸುತ್ತಿವೆ.