ಕಾಸರಗೋಡು: ಬೈಕ್ ಮತ್ತು ಜೀಪು ನಡುವೆ ಅಪಘಾತ – ಸವಾರ ಮೃತ್ಯು

ಕಾಸರಗೋಡು: ಬೈಕ್ ಮತ್ತು ಜೀಪು ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಜಾಲ್ಸೂರು ಚೆರ್ಕಳ ರಸ್ತೆಯ ಬೋವಿಕ್ಕಾನದಲ್ಲಿ ಗುರುವಾರ ರಾತ್ರಿ ನಡೆದಿದೆ. ಮಲ್ಲ ಕಲ್ಲುಕಂಡದ ಅಖಿಲ್ (22) ಮೃತಪಟ್ಟ ಯುವಕ. ಬೋವಿಕ್ಕಾನದಿಂದ ಕಲ್ಲು ಕಂಡದ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದ್ದು, ಅಖಿಲ್ ಎಸ್ಎಫ್ಐ ಕಾರ್ಯಕರ್ತನಾಗಿದ್ದನು. ಶ್ರೀನಗರ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ ಇನ್ನು ಗಂಭೀರ ಗಾಯಗೊಂಡ ಅಖಿಲ್‌‌ನನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.