Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಿರು ಸಾಲ ಸೌಲಭ್ಯಕ್ಕೆ : ಅರ್ಜಿ ಆಹ್ವಾನ

 

ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಕಿರು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ದೋಬಿ, ಇಸ್ತ್ರಿ ಸೇವೆ, ಹಳೆ ಪಾತ್ರೆಗಳ ವ್ಯಾಪಾರ, ಬಡಗಿ, ಬೀದಿರಿನ ಬುಟ್ಟಿ, ಬೊಂಬು, ಏಣಿ ವ್ಯಾಪಾರ, ಹೂವಿನ ಕುಂಡಗಳ ವ್ಯಾಪಾರ, ಮಡಿಕೆ ವ್ಯಾಪಾರ, ಆಹಾರ ತಯಾರಿಸಿ ಮಾರಾಟ ಮಾಡುವರು(ಕ್ಯಾಟರಿಂಗ್), ದಿನ ಪತ್ರಿಕೆ ಹಂಚಿಕೆ ಮತ್ತು ಹಾಲು ಮಾರಾಟ ಮಾಡುವವರು ಪಿಎಂ-ಸ್ವಾನಿಧಿ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಸಕ್ತರು, ರೇಷನ್ ಕಾರ್ಡ್, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಉಳಿತಾಯದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ವ್ಯಾಪಾರ ಮಾಡುತ್ತಿರುವ ಸ್ಥಳದ ಫೆÇೀಟೋ, ಪಾಸ್ ಪೆÇೀರ್ಟ್ ಸೈಜ್ ಫೆÇೀಟೋ-2, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದಾಖಲೆಗಳೊಂದಿಗೆ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಡೇ-ನಲ್ಮ್ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.