ಕುವೈತ್ ಎಮಿರ್ ನಿಧನ : ಭಾರತದಲ್ಲಿ ಒಂದು ದಿನದ ‘ಶೋಕಾಚರಣೆ’ ಕೇಂದ್ರ ಸರ್ಕಾರ ಘೋಷಣೆ
ದೆಹಲಿ : ಕುವೈತ್ ದೊರೆ ಎಮಿರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್-ಸಬಾಹ್ ಅವರ ನಿಧನದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು 2023 ರ ಡಿಸೆಂಬರ್ 17 ರಂದು ಭಾರತದಾದ್ಯಂತ ಒಂದು ದಿನದ ರಾಜ್ಯ ಶೋಕಾಚರಣೆ ನಡೆಸಲು ನಿರ್ಧರಿಸಿದೆ ಎಂದು ಗೃಹ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಹೌದು ಕೇಂದ್ರ ಸರ್ಕಾರ ಭಾನುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದೆ.
ಈ ಸಮಯದಲ್ಲಿ ರಾಷ್ಟ್ರಧ್ವಜವು ಅರ್ಧಮಟ್ಟದಲ್ಲಿ ಹಾರಾಡುತ್ತದೆ. ಈ ಅವಧಿಯಲ್ಲಿ ಯಾವುದೇ ಮನರಂಜನಾ ಕಾರ್ಯಗಳು ಇರುವುದಿಲ್ಲ ಎಂದು ತಿಳಿಸಿದೆ. ಕುವೈತ್ ನ ಎಮಿರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್ (86) ನಿಧನರಾಗಿದ್ದಾರೆ. ಕುವೈತ್ನ ರಾಜ್ಯ ಟೆಲಿವಿಷನ್ ಶನಿವಾರ (ಡಿಸೆಂಬರ್ 16) ಈ ಮಾಹಿತಿಯನ್ನು ನೀಡಿದೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುವೈತ್ ದೊರೆ ಎಮಿರ್ ಶೇಖ್ ನವಾಫ್ ಅಲ್ ಅಹ್ಮದ್ ಅಲ್-ಸಬಾಹ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಶೇಖ್ ನವಾಫ್ ಅವರ ದುರದೃಷ್ಟಕರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ರಾಜಮನೆತನ ಮತ್ತು ಕುವೈತ್ ಜನತೆಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.