ಕೂದಲ ಆರೈಕೆಯಲ್ಲಿ ಹೇರ್ ಕಂಡೀಶನರ್
ಕೂದಲ ಆರೈಕೆಯಲ್ಲಿ ಹೇರ್ ಕಂಡೀಶನರ್ ಪ್ರಮುಖ ಪಾತ್ರ ವಹಿಸುತ್ತದೆ. ಮೃದುವಾದ, ರೇಷ್ಮೆಯಂತಹ ಕೂದಲನ್ನು ಪಡೆಯಲು ಹೇರ್ ಕಂಡಿಷನರ್ ಬಹಳ ಮುಖ್ಯ. ಆದರೆ, ಹೇರ್ ಕಂಡಿಷನರ್ ಅನ್ವಯಿಸುವಾಗ ಮಾಡುವ ಕೆಲವು ತಪ್ಪುಗಳು ನಿಮ್ಮ ಕೂದಲ ಬೆಳವಣಿಗೆಗೆ ಹಾನಿಯುಂಟು ಮಾಡಬಹುದು. ಕೂದಲಿಗೆ ಅನುಗುಣವಾಗಿ ಕಂಡಿಷನರ್ ಬಳಸಬೇಕು. ಕೂದಲು ತೆಳುವಾಗುತ್ತಿರುವವರು ಕಂಡಿಷನರ್ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ತೆಳ್ಳನೆಯ ಕೂದಲು ತುಂಡಾಗುವ ಸಾಧ್ಯತೆ ಹೆಚ್ಚು. ಕೆಲವರು ಶಾಂಪೂ ಮಾಡದೇ ನೇರವಾಗಿ ಹಾಗೆಯೇ ಕಂಡಿಷನರ್ ಅನ್ನು ಅನ್ವಯಿಸುತ್ತಾರೆ. ಆದರೆ, ಇದು ನಿಮ್ಮ ಕೂದಲಿಗೆ ಹಾನಿಯುಂಟು ಮಾಡಬಹುದು. ಕೆಲವರು ಶಾಂಪೂ ಮತ್ತು ಕಂಡಿಷನರ್ ಎರಡನ್ನೂ ಒಟ್ಟಿಗೆ ಬಳಸುತ್ತಾರೆ. ಆದರೆ, ಇದರಿಂದ ಕೂದಲಿಗೆ ಹಾನಿಯುಂಟಾಗಬಹುದು. ಹಾಗಾಗಿ, ಎಂದಿಗೂ ಕೂಡ ಇಂತಹ ತಪ್ಪನ್ನು ಮಾಡಬೇಡಿ. ಒಣ ಮತ್ತು ನಿರ್ಜೀವ ಕೂದಲಿಗೆ ಕಂಡಿಷನರ್ ಬೇಕು. ಕೆಲವೊಮ್ಮೆ ಬಿಸಿಲಿನ ಶಾಖ, ಮಾಲಿನ್ಯ, ಧೂಳು ಮತ್ತು ಹೇರ್ ಸ್ಟೈಲಿಂಗ್ ಉಪಕರಣಗಳು ಕೂದಲನ್ನು ಒಣಗಿಸುತ್ತವೆ. ಒಣ ಕೂದಲಿನಲ್ಲಿ ತೇವಾಂಶ ಇರುವುದಿಲ್ಲ. ಆದ್ದರಿಂದ ಕೂದಲಿನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮಾಯಿಶ್ಚರೈಸಿಂಗ್ ಕಂಡಿಷನರ್ ಅಗತ್ಯವಿರುತ್ತದೆ. ತೇವಾಂಶವನ್ನು ಮರಳಿ ಪಡೆಯಲು ನೀವು ಪ್ರತಿ ದಿನ ಕಂಡಿಷನರ್ ಬಳಸಬಹುದು. ಕೂದಲು ಶುಷ್ಕತೆಯನ್ನು ತಡೆಗಟ್ಟಲು, ನಿಮ್ಮ ಕೂದಲಿಗೆ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಕಂಡಿಷನಿಂಗ್ ಮಾಡಿ. ಕಂಡಿಷನರ್ ಅನ್ನು ಅಪ್ಲೈ ಮಾಡುವಾಗ ಬುಡಕ್ಕೆ ಹಚ್ಚಬಾರದು ಎಂಬುದನ್ನು ನೆನಪಿನಲ್ಲಿಡಿ. ಯಾವಾಗಲೂ ಕಂಡಿಷನರ್ ಅನ್ನು ಕೂದಲಿನ ಮಧ್ಯದಿಂದ ತುದಿಯವರೆಗೆ ಅನ್ವಯಿಸಬೇಕು.ಕೂದಲಿಗೆ ಕಂಡಿಷನರ್ ಅನ್ವಯಿಸಿದ ಬಳಿಕ ದೀರ್ಘಕಾಲ ಹಾಗೆಯೇ ಬಿಡುವುದು ಒಳ್ಳೆಯದಲ್ಲ. ಹಾಗಂತ ಕಂಡಿಷನರ್ ಅಪ್ಲೈ ಮಾಡಿ ತಕ್ಷಣ ತೊಳೆದರೂ ಪ್ರಯೋಜನವಾಗುವುದಿಲ್ಲ. ನೀವು ಕೂದಲಿಗೆ ಕಂಡಿಷನರ್ ಅನ್ವಯಿಸಿದ ಬಳಿಕ ಒಂದೆರಡು ನಿಮಿಷಗಳ ನಂತರ ಹೇರ್ ವಾಶ್ ಮಾಡಿ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.)