ಕೆಇಎ ನಲ್ಲಿ 64 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಬೆಂಗಳೂರು: ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್(ಸಿವಿಲ್) ಹಾಗೂ ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿ ಆಹ್ವಾನಿಸಿದೆ.
ಬಿಇ ಮತ್ತು ಬಿ.ಕಾಮ್ ಪದವಿ ಪಡೆದವರು ಮಾ.10ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 64[ಲೆಕ್ಕ ಸಹಾಯಕರು-14(11+3)] ಹುದ್ದೆಗಳು ಖಾಲಿ ಇದ್ದು, ಸಾಮಾನ್ಯ ಅಭ್ಯರ್ಥಿಗಳು 750 ರೂ. ಪಾವತಿಸಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಪಿಡಿಎಫ್ ಪರಿಶೀಲಿಸಿ.