Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೆಪಿಎಸ್ಸಿ ಅಧ್ಯಕ್ಷರು –ಸದಸ್ಯರಿಗೆ ಗುಡ್ ನ್ಯೂಸ್ ಪಿಂಚಿಣಿ ಎರಡು ಪಟ್ಟು ಹೆಚ್ಚು.

 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಪಿಂಚಣಿಯನ್ನು ಎರಡು ಪಟ್ಟಿಗಿಂತಲೂ ಹೆಚ್ಚು ಮೊತ್ತದಷ್ಟು ಏರಿಕೆ ಮಾಡುವ ಪ್ರಸ್ತಾವಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರ ಪಿಂಚಣಿ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಲೋಕಸೇವಾ ಆಯೋಗ ಸೇವಾ ಷರತ್ತುಗಳು ತಿದ್ದುಪಡಿ ನಿಯಮಗಳು–2023’ಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ. ಆಯೋಗದ ಅಧ್ಯಕ್ಷರು ಅಥವಾ ಸದಸ್ಯರಾಗಿ ಆರು ವರ್ಷಗಳ ಪೂರ್ಣಾವಧಿಯವರೆಗೆ ಕಾರ್ಯನಿರ್ವಹಿಸಿದವರಿಗೆ ಪಿಂಚಣಿ ಹೆಚ್ಚಳಕ್ಕೆ ತಿದ್ದುಪಡಿ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕೆಪಿಎಸ್ಸಿ ಅಧ್ಯಕ್ಷರಾಗಿ ನಿವೃತ್ತರಾದವರಿಗೆ ಈಗ ತಿಂಗಳಿಗೆ ₹ 29,640 ಪಿಂಚಣಿ ನೀಡಲಾಗುತ್ತದೆ. ಅದನ್ನು ತಿಂಗಳಿಗೆ ₹ 67,500ಕ್ಕೆ ಹೆಚ್ಚಳ ಮಾಡಲಾಗಿದೆ. ಕೆಪಿಎಸ್ಸಿ ಸದಸ್ಯರಾಗಿ ನಿವೃತ್ತರಾದವರಿಗೆ ತಿಂಗಳಿಗೆ ₹ 24,960 ಪಿಂಚಣಿ ನೀಡಲಾಗುತ್ತಿದೆ. ಅದನ್ನು ತಿಂಗಳಿಗೆ ₹ 61,500ಕ್ಕೆ ಹೆಚ್ಚಳ ಮಾಡಲು ನಿಯಮಗಳಿಗೆ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ.

ಇನ್ನು ಮುಂದೆ ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರಾಗುವವರಿಗೆ ಹೊಸ ಪಿಂಚಣಿ ಯೋಜನೆಯ ಅಡಿಯಲ್ಲಿ ಪಿಂಚಣಿ ಪಾವತಿಸುವ ಕುರಿತು ಪರಿಗಣಿಸಲು ಸಂಪುಟ ಸಭೆ ನಿರ್ಧರಿಸಿದೆ.