ಕೆಪಿಎಸ್ ಸಿ ಪರಿಕ್ಷೆ ಹಿನ್ನಲೆ – ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ
ಮಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ಡಿಸೆಂಬರ್ 16 ಮತ್ತು 17ರಂದು ಕನ್ನಡ ಭಾಷೆ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಂಗಳೂರು ನಗರದ ಒಟ್ಟು ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಕನ್ನಡ ಭಾಷೆ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸಲು ಸದರಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿರ್ಬಂಧಾಜ್ಞೆಯನ್ನು ಜ್ಯಾರಿಗೊಳಿಸಿ ಉಪ ಪೊಲೀಸ್ ಆಯುಕ್ತ ಸಿದ್ಧಾರ್ಥ್ ಗೋಯಲ್ ಆದೇಶಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ವಿವರ: ಡಿಸೆಂಬರ್ 16ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸರಕಾರಿ ಪಿ.ಯು. ಮಹಿಳಾ ಕಾಲೇಜು ಕಾರ್ ಸ್ಟ್ರೀಟ್ ಮಂಗಳೂರು. ಡಿಸೆಂಬರ್ 17ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸರಕಾರಿ ಪಿ.ಯು. ಮಹಿಳಾ ಕಾಲೇಜು ಕಾರ್ಸ್ಟ್ರೀಟ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಸ್ಟ್ರೀಟ್, ಮಂಗಳೂರು, ಸರಕಾರಿ ಪಿ.ಯು. ಮಹಿಳಾ ಕಾಲೇಜು ಬಲ್ಮಠ.