Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜರಾದ ಲಕ್ಷ್ಮೀಶ ತೋಳ್ಪಾಡಿ

ದೆಹಲಿ: 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು 24 ಭಾಷೆಗಳಿಗೆ ಪ್ರಕಟವಾಗಿದ್ದು ಇದರಲ್ಲಿ ಪ್ರಬಂಧ ವಿಭಾಗದಲ್ಲಿ ಕನ್ನಡದ ಖ್ಯಾತ ಚಿಂತಕ, ಲೇಖಕ, ಲಕ್ಷ್ಮೀಶ ತೋಳ್ಪಾಡಿ ಅವರ ಕೃತಿಗೆ ಪ್ರಶಸ್ತಿ ಲಭಿಸಿದೆ. ಮಹಾಭಾರತ ಅನುಸಂಧಾನದ ಭಾರತಯಾತ್ರೆ ಪ್ರಬಂಧಕ್ಕೆ ಈ ಗೌರವ ಸಿಕ್ಕಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಲಕ್ಷೀಶ ತೋಳ್ಪಾಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರಾಗಿದ್ದಾರೆ. ಭಗವದ್ಗೀತೆಯ ಬಗೆಗಿನ ಮಹಾಯುದ್ದಕ್ಕೆ ಮುನ್ನ ಮೊದಲ ಪ್ರಕಟಿತ ಕೃತಿ. ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ, ಸಂಪಿಗೆ ಭಾಗವತ,ಬಾಳು ಸಾವು ಒಡ್ಡುತ್ತಿರುವ ಆಮಿಷ, ಆನಂದ ಲಹರೀ,ಭಕ್ತಿಯ ನೆಪದಲ್ಲಿ,ಭವ ತಲ್ಲಣ’ ಕೃತಿಗಳು ಪ್ರಕಟವಾಗಿವೆ.
ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾ. ಶ್ರೀನಿವಾಸ ರಾವ್ ಅವರು ಹಿಂದಿ ಹೊರತುಪಡಿಸಿ ಇತರ ಭಾಷೆಗಳಲ್ಲಿ ವಿಜೇತರ ಹೆಸರನ್ನು ಪ್ರಕಟಿಸಿದರು. ಪ್ರಶಸ್ತಿ ವಿಜೇತರು ಮಾರ್ಚ್ 12, 2024 ರಂದು ನವದೆಹಲಿಯ ಕಮಾನಿ ಸಭಾಂಗಣದಲ್ಲಿ ಗೌರವ ಪಡೆಯಲಿದ್ದಾರೆ.