Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೇಸ್ ದಾಖಲಿಸ ಬೇಕಾದ್ರೆ ಬಾಡಿವೋರ್ನ್ ಕ್ಯಾಮರಾ ಧರಿಸುವುದು ಕಡ್ಡಾಯ.! ಡಿಜಿ-ಐಜಿ ಆದೇಶ.!

 

ಬೆಂಗಳೂರು: ಸುಳ್ಳು ಕೇಸ್ ದಾಖಲು, ಭ್ರಷ್ಟಾಚಾರ, ಸುಲಿಗೆ, ಅನುಚಿತ ವರ್ತನೆ ಸೇರಿ ಪೊಲೀಸರ ವಿರುದ್ಧ ಕೇಳಿ ಬರುತ್ತಿರೋ ಆರೋಪಗಳ ನಿಯಂತ್ರಣ ಹಾಗೂ ಕರ್ತವ್ಯದಲ್ಲಿ ಪಾರದರ್ಶಕತೆ ತರೋ ಉದ್ದೇಶದಿಂದ, ಬಾಡಿವೋರ್ನ್ ಕ್ಯಾಮರಾ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದಷ್ಟೇ ಅಲ್ಲದೇ ಯಾವುದೇ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸಲು ಹೋಗುವ ಪೊಲೀಸರು ಇನ್ಮುಂದೆ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು. ಬಂಧನದ ಎಲ್ಲಾ ಪ್ರಕ್ರಿಯೆಯೂ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರಬೇಕು ಎಂಬುದಾಗಿ ಡಿಜಿ-ಐಜಿ ಆದೇಶಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಚಾರ ಹಾಗೂ ಹೊಯ್ಸಳ ಪೊಲೀಸರಿಗಷ್ಟೇ ಸೀಮಿತವಾಗಿದ್ದ ಬಾಡಿವೋರ್ನ್ ಕ್ಯಾಮರಾ ಧರಿಸುವ ಯೋಜನೆಯನ್ನು ರಾಜ್ಯದ ಎಲ್ಲಾ ಪೊಲೀಸರಿಗೂ ವಿಸ್ತರಿಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಆದೇಶ ಮಾಡಿದ್ದಾರೆ.

ಬಂಧನದ ವೇಳೆ ಕ್ಯಾಮರಾಗಳನ್ನು ಧರಿಸುವ ವ್ಯವಸ್ಥೆ ಜಾರಿಗೊಳಿಸುವಂತೆ ಜೂನ್.10, 2022ರಂದು ನೀಡಿದ್ದ ಹೈಕೋರ್ಟ್ ಆದೇಶವನ್ನು ಪೊಲೀಸ್ ಇಲಾಖೆ ಈಗ ಅನುಷ್ಠಾನಕ್ಕೆ ತರುತ್ತಿದೆ.

ಇದಕ್ಕಾಗಿ ಮಾರ್ಗಸೂಚಿಗಳನ್ನು ಕೂಡ ಹೊರಡಿಸಲಾಗಿದ್ದು, ವ್ಯಕ್ತಿಗಳ ಮುಖಗಳು ಹಾಗೂ ಸ್ಥಳದ ಘಟನಾವಳಿಗಳು ಸರಿಯಾಗಿ ಚಿತ್ರೀಕರಣವಾಗುವಂತೆ ಎಡಭುಜಕ್ಕೆ ಬಾಡಿವೋರ್ನ್ ಕ್ಯಾಮರಾ ಧರಿಸಿರಬೇಕು. ಯಾರ ಬಗ್ಗೆ ರೆಕಾರ್ಡ್ ಮಾಡಲಾಗುತ್ತಿದೆಯೋ ಅವರಿಗೆ ಚಿತ್ರೀಕರಣದ ಬಗ್ಗೆ ತಿಳಿಸಬೇಕು ಎಂದಿದೆ.

ಆಯಾ ಘಟಕದ ಮುಖ್ಯಸ್ಥರು, ಕ್ಯಾಮರಗಳ ಸಂಪೂರ್ಮ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕ್ಯಾಮರಾ ಬಳಕೆಯ ತರಬೇತಿ ಪಡೆದ ಅಧಿಕಾರಿ ಮತ್ತು ಸಿಬ್ಬಂದಿಗಷ್ಟೇ ಕೊಡಬೇಕು ಎಂದಿದೆ.