Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೈಲಾಸ ಯಾತ್ರೆಯ ವೇಳೆ ನದಿಗೆ ಬಿದ್ದ ಕಾರು- ಬೆಂಗಳೂರಿನ ಇಬ್ಬರು ಸೇರಿ 6 ಮಂದಿ ಸಾವು

ಉತ್ತರಾಖಂಡ್: ಕಾರು ನದಿಗೆ ಬಿದ್ದ ಪರಿಣಾಮ ಕರ್ನಾಟಕದ ಇಬ್ಬರು ಸೇರಿದಂತೆ 6 ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಕೈಲಾಸ ದೇವರ ದರ್ಶನ ಮಾಡಿ ವಾಪಾಸ್‌ ಬರುವ ವೇಳೆ ಈ ದುರಂತ ಘಟನೆ ನಡೆದಿದೆ ಎಂದು ಪಿಥೋರಗಢ್ ಪೊಲೀಸ್ ಅಧೀಕ್ಷಕ ಲೋಕೇಶ್ವರ್ ಸಿಂಗ್ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಕಾರು ಕಾಳಿ ನದಿಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದರೆ.

ಮೃತರಲ್ಲಿ ಇಬ್ಬರು ಬೆಂಗಳೂರಿನವರು, ಇಬ್ಬರು ತೆಲಂಗಾಣದವರು ಹಾಗೂ ಇಬ್ಬರು ಉತ್ತರಾಖಂಡದವರು ಎಂದು ಲೋಕೇಶ್ವರ್ ಸಿಂಗ್ ಹೇಳಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತದೇಹದ ಶೋಧಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ಬಂದಿದೆ.