Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೊರಗಜ್ಜ ಸಿನೆಮಾದ ಚಿತ್ರೀಕರಣದ ವೇಳೆ ಕಿಡಿಗೇಡಿಗಳಿಂದ ದಾಂಧಲೆ-ಸಿನೆಮಾ ಸೆಟ್ ನಾಶ

ಚಿಕ್ಕಮಗಳೂರು: ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾ ಶೂಟಿಂಗ್ ಪ್ರಾರಂಭದಿಂದಲೇ ಒಂದಲ್ಲ ಒಂದು ವಿವಾದಗಳಿಗೆ ಒಳಗಾಗುತ್ತಲೇ ಇದೆ. ಈ ನಡುವೆ ಕುದುರೆ ಮುಖ ಸಮೀಪದ ಕಳಸದಲ್ಲಿ ‘ಕೊರಗಜ್ಜ’ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ಸುಧೀರ್ ಅತ್ತಾವರ್ ಅಕ್ಟೋಬರ್ 27ರಂದು ಶೂಟ್ ನಡೆಯುತ್ತಿತ್ತು. ಬೆಳಿಗ್ಗೆ ಶೂಟ್ ಮಾಡಿದೆವು. ಮಧ್ಯಾಹ್ನ ಊಟದ ನಂತರ ಕೆಲವರು ತಲ್ವಾರ್ ಹಿಡಿದು ಸೆಟ್​ಗೆ ಬಂದರು. ಅವರು ಆವೇಶದಲ್ಲಿ ಇದ್ದರು. ನಂತರ ಮತ್ತೊಂದು ತಂಡದವರು ಸೆಟ್​ನ ಪರಿಶೀಲಿಸಿದ್ದಾರೆ. ಆ ಬಳಿಕ ಮೂರನೆ ತಂಡ ಕೂಡ ಬಂತು. ಅಲ್ಲಿ ಬಿಜೆಪಿ ನಾಯಕರಿದ್ದರು ಎಂದಿದ್ದಾರೆ. ನಾನು ಪೊಲೀಸರಿಗೆ ದೂರು ಕೊಟ್ಟಿಲ್ಲ. ಗಣೇಶ ಆಚಾರ್ಯರಂತಹ ಖ್ಯಾತ ಕೊರಿಯೋಗ್ರಾಫರ್​ ಬಂದಿದ್ದ ವೇಳೆ ಹೀಗಾಯಿತಲ್ಲ ಎಂದು ಬಹಳ ನೋವಾಯಿತು” ಎಂದು ಹೇಳಿದರು.

ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ನಟಿ ಶುಭಾ ಪೂಂಜ ಮೊದಲಾದವರು ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಆದರೆ, ಸಿನಿಮಾ ಸೆಟ್ ನಾಶವಾಗಿದೆ.