ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ- ಹೆಂಡತಿ ವಿರುದ್ಧ ದೂರು ದಾಖಲು
ನವದೆಹಲಿ: ಕೋಪದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಕಿವಿ ಕಚ್ಚಿದ ಘಟನೆ ಸುಲ್ತಾನ್ ಪುರಿಯಲ್ಲಿ ನಡೆದಿದೆ.
45 ವರ್ಷದ ಗಂಡನ ಕಿವಿಯನ್ನು ಕಚ್ಚಿದ ಪರಿಣಾಮ ಬಲ ಕಿವಿ ತುಂಡಾಗಿದ್ದು, ಕೊನೆಗೆ ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿವಿ ಕಚ್ಚಿದ ಹೆಂಡತಿ ವಿರುದ್ಧ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಪ್ರಕಾರ ಸೆಕ್ಷನ್ 324 ಅಡಿಯಲ್ಲಿ ಮಹಿಳೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸದ್ಯ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ನವೆಂಬರ್ 20ರಂದು ಈ ಘಟನೆ ನಡೆದಿದೆ. ಗಂಡ ಬೆಳಿಗ್ಗೆ 9.20ಕ್ಕೆ ಕಸ ಎಸೆಯಲು ಮನೆಯಿಂದ ಹೊರ ಹೋಗಿದ್ದ. ಈ ವೇಳೆ ಹೆಂಡತಿ ಬಳಿ ಸ್ವಚ್ಛಗೊಳಿಸಲು ಹೇಳಿದ್ದಾನೆ.
ಆದರೆ ಮನೆಗೆ ಬಂದ ಕೂಡಲೇ ಹೆಂಡತಿ ಆತನ ಬಳಿ ಜಗಳ ತೆಗೆದಿದ್ದಾಳೆ. ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಮನೆಯನ್ನು ಮಾರಿ ಪಾಲು ನೀಡುವಂತೆ ಪತ್ನಿ ಕೇಳಿಕೊಂಡಿದ್ದಾಳೆ. ಬಳಿಕ ಆಕೆಯನ್ನು ಅರ್ಥ ಮಾಡಿಸಲು ಪ್ರಯತ್ನಿಸಿದರು. ಆಕೆ ಜಗಳ ತೆಗೆದಿದ್ದಾಳೆ. ಕೊನೆಗೆ ಹೊಡೆಯಲು ಯತ್ನಿಸಿದಳು. ಅಷ್ಟರಲ್ಲಿ ನಾನು ಆಕೆಯನ್ನು ತಡೆದೆ. ಬಳಿಕ ಮನೆಯಿಂದ ಹೊರ ಹೋಗುವ ವೇಳೆ ಆಕೆ ಹಿಂಭಾಗದಿಂದ ಬಂದು ನನ್ನ ಬಲ ಕಿವಿಯನ್ನು ಕಚ್ಚಿದ್ದಾಳೆ ಎಂದು ಗಂಡ ದೂರಿನಲ್ಲಿ ತಿಳಿಸಿದ್ದಾನೆ.