ಕ್ರಿಕೆಟ್ ಆಡಿ ನೀರು ಕುಡಿದ ಬಾಲಕ ಕುಸಿದು ಬಿದ್ದು ಮೃತ್ಯು
ಲಕ್ನೋ: ಕ್ರಿಕೆಟ್ ಆಡಿ ನೀರು ಕುಡಿದ ಬಳಿಕ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಲ್ಮೋ ಜಿಲ್ಲೆಯಲ್ಲಿ ನಡೆದಿದೆ.
ಹಸನ್ಪುರದ ಕಾಯಸ್ತಾನ್ನ 10ನೇ ತರಗತಿ ವಿದ್ಯಾರ್ಥಿ ಪ್ರಿನ್ಸ್ ಸೈನಿ ಎಂಬ ಬಾಲಕ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದ ವೇಳೆ ಶನಿವಾರ ಈ ಘಟನೆ ನಡೆದಿದೆ.
ಪ್ರಿನ್ಸ್ ಅವರ ಸ್ನೇಹಿತರು ವಿಚಾರವನ್ನು ಮನೆಯವರಿಗೆ ತಿಳಿಸಿದ್ದು,ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರೀಕ್ಷೆ ಮಾಡಿದ ವೈದ್ಯರು ಆದಾಗಲೇ ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಬಾಲಕನ ಸಾವಿಗೆ ಹೃದಯಾಘಾತವೇ ಕಾರಣವಿರಬಹದೆಂದು ಶಂಕಿಸಲಾಗಿದೆ. ಸದ್ಯ ಈ ಬಗ್ಗೆ ಪೋಷಕರು ದೂರು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.