ಖರ್ಜೂರ ಯಾರಿಗೆ ತಾನೆ ಗೊತ್ತಿಲ್ಲ ಅದರಲ್ಲೂ ಮುಸಲ್ಮಾನರ ಮದುವೆಯಲ್ಲಿ ತಂಬೂಲವಾಗಿ ಬಾದಾಮಿ ಜೊತೆಗೆ ಈ ಖರ್ಜೂರವನ್ನೆ ನೀಡುತ್ತಾರೆ
ಇದನ್ನು ಸೇವಿಸುವ ಜನರಿಗೆ ಇದರಿಂದ ಆಗುವ ಉಪಯೋಗದ ಬಗ್ಗೆ ಒಂದು ಮಾಹಿತಿ ತಿಳಿದಿರುವುದಿಲ್ಲ.

ಇದರಲ್ಲಿ ಹೆಚ್ಚು ಪ್ರಮಾಣದ ಮೆಗ್ನೀಸಿಯಂ, ತಾಮ್ರ, ಗಂಧಕ, ಕಬ್ಬಿಣ, ಪೊಟಾಷಿಯಂ, ಕ್ಯಾಲ್ಸಿಯಂ ಹಾಗೂ ಅಲ್ಪ ಪ್ರಮಾಣದ ಎಣ್ಣೆಯ ಅಂಶ ಹೊಂದಿದೆ.
ಹಾಗೆ ಅಂತ ಇದನ್ನು ಹೆಚ್ಚಾಗಿಯೂ ಸೇವಿಸಬಾರದು.
ಇದರ ಮಿತವಾದ ಸೇವನೆಯಿಂದ ರಕ್ತಹೀನತೆ ಯನ್ನು ತಡೆಗಟ್ಟಲು ಸಹಾಯಕವಾಗುತ್ತದೆ.

ಅಧಿಕ ರಕ್ತದೊತ್ತಡದಿಂದ ಬಳಲುವರು ದಿನವೂ 3-4 ಖರ್ಜೂರ ಸೇವಿಸುವುದರಿಸೇವಿಸುವುದರಿಂದ ಕ್ರಮೇಣ ಒತ್ತಡವು ಕಡಿಮೆ ಮಾಡುತ್ತದೆ.
ಹೊಟ್ಟೆ ಹಾಗೂ ಕರುಳಿನ ಕ್ಯಾನ್ಸರ್ ನ್ನು ಬರದಂತೆ ತಡೆಯಲು ಸಹಕಾರಿ.

ದೇಹದ ಅಲಸ್ಯವನ್ನು ಉಪಶಮನ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಕರಿಸಿ ಮಲಬದ್ದತೆಯನ್ನು ತಡೆಯಲು ಉಪಯುಕ್ತ
ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಮಾಸಿಕ ಸಮಯದಲ್ಲಿ ಹಾಗೂ ಬಾಣಂತಿಯರಿಗೆ ಹೆಚ್ಚು ಉತ್ತಮ ರೀತಿಯಲ್ಲಿ ಸಹಕಾರಿಯಾಗಿದೆ.

ಅಲ್ಲದೆ ದಿನ ಎರಡು ಅಥವಾ ಮೂರು ಖರ್ಜೂರ ತಿನ್ನುವುದರಿಂದ ದೇಹದ ಶಕ್ತಿ ಹೆಚ್ಚಲಿದೆಯಂತೆ.!

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here