ಖಲಿಸ್ತಾನಿ ಉಗ್ರರ ‘ಮೋಸ್ಟ್ ವಾಂಟೆಡ್ ಪಟ್ಟಿ’ಗೆ 21 ಹೆಸರು ಸೇರ್ಪಡೆಗೊಳಿಸಿದ ಎನ್ಐಎ
ನವದೆಹಲಿ: ಕೇಂದ್ರೀಯಾ ತನಿಖಾ ಸಂಸ್ಥೆ ಖಲಿಸ್ತಾನಿ ಭಯೋತ್ಪಾದಕರ ಮಹತ್ವದ ಕ್ರಮ ಕೈಗೊಂಡಿದ್ದು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸುಮಾರು 21 ಖಲಿಸ್ತಾನಿಗಳ ಹೆಸರುಗಳನ್ನು ದಾಖಲಿಸಿದೆ.
ಎನ್ಐಎ ವೆಬ್‌ಸೈಟ್‌ನಲ್ಲಿ ಖಲಿಸ್ತಾನಿಗಳ ಹೆಸರುಗಳನ್ನು ಫೋಟೋದೊಂದಿಗೆ ಪ್ರಕಟಿಸಲಾಗಿದ್ದು ಈ ಪೈಕಿ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯಿಂದ ಪಲಾಯನಗೈದ ಗುರ್ಪತ್ವಂತ್ ಸಿಂಗ್ ಪನ್ನುನ್ ಹೆಸರು ತನಿಖಾ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇದಲ್ಲದೇ ಲಖ್ಬೀರ್ ಸಿಂಗ್ ಲಾಂಡಾ, ಮಂದೀಪ್ ಸಿಂಗ್, ಸತ್ನಾಮ್ ಸಿಂಗ್, ಅಮ್ರಿಕ್ ಸಿಂಗ್ ಸೇರಿದಂತೆ ಕೆನಡಾ, ಅಮೆರಿಕ ಮತ್ತು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಹೆಸರುಗಳು ಈ ಪಟ್ಟಿಯಲ್ಲಿವೆ.
ಇಷ್ಟೇ ಅಲ್ಲದೇ ತನಿಖಾ ಸಂಸ್ಥೆಯ 5 ಸದಸ್ಯರ ತಂಡ ಶೀಘ್ರದಲ್ಲೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿ ಭಾರತೀಯ ರಾಯಭಾರಿ ಕಚೇರಿ ಮೇಲಿನ ದಾಳಿಯ ತನಿಖೆ ನಡೆಸಲಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.