Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್.! ಈ ಮಾನದಂಡಗಳು ಇಲ್ಲ.!

 

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡಲು ನಿಗದಿಪಡಿಸಿದ್ದ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಭೂ ಪರಿವರ್ತನೆ ಮತ್ತಿತರ ಕಠಿಣ ಮಾನದಂಡಗಳನ್ನು ತಾತ್ಕಾಲಿಕವಾಗಿ ಕೈಬಿಡಿಲಾಗಿದೆ. ಈ ಬಗ್ಗೆ ಜಸ್ಟ್ ಮುಚ್ಚಳಿಕೆ ಪತ್ರ ಬರೆಸಿಕೊಂಡು ಈ ವರ್ಷದ ಮಟ್ಟಿಗೆ ಮಾನ್ಯತೆ ನವೀಕರಿಸೋದಕ್ಕೆ ಅನುಮತಿಸಿದೆ. ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳ ಬಹುದಿನಗಳ ಬೇಡಿಕೆಗೆ ಸದ್ಯದ ಮಟ್ಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ

ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಾದಂತ ಬಿ.ಬಿ ಕಾವೇರಿ ಅವರು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಶಾಲಾ ಮಾನ್ಯತೆ ನವೀಕರಣಕ್ಕಾಗಿ ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ಪ್ರಮಾಣಪತ್ರ ಸಲ್ಲಿಸಬೇಕು. ಶಾಲೆ ನಡೆಯುತ್ತಿರೋ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಂಡ ಆದೇಶವನ್ನು ನೀಡಬೇಕು ಎಂಬುದು ಸೇರಿದಂತೆ ಇತರೆ ಮಾನದಂಡಗಳನ್ನು ಹೊಸ ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡಲು, ಹಳೆ ಶಾಲೆಗಳಿಗೆ ಮಾನ್ಯತೆ ನವೀಕರಿಸೋದಕ್ಕೆ ಕಡ್ಡಾಯವಾಗಿತ್ತು. ಆದ್ರೇ ಈ ವರ್ಷ ಮಾತ್ರ ಈ ನಿಯಮ ಸಡಿಲಗೊಳಿಸಲಾಗಿದೆ ಅಂತ ತಿಳಿಸಿದ್ದಾರೆ.

2023-24ನೇ ಸಾಲಿಗೆ ಅನ್ವಯಿಸುವಂತೆ ಈ ಮಾನದಂಡಗಳನ್ನು ಪಾಲಿಸುವ ವಿಚಾರದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು, ಮಾನ್ಯತೆ ನವೀಕರಣ ಪಡೆಯೋದಕ್ಕೆ ಅವಕಾಶ ನೀಡಲಾಗಿದೆ ಅಂತ ಆದೇಶದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.