Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಖ್ಯಾತ ನಟ ಬ್ರಿಜೇಶ್ ತ್ರಿಪಾಠಿ ಹೃದಯಘಾತದಿಂದ ನಿಧನ

ಮುಂಬೈ: ಖ್ಯಾತ ನಟ ಬ್ರಿಜೇಶ್ ತ್ರಿಪಾಠಿ ಹೃದಯಘಾತದಿಂದ ನಿಧನರಾಗಿದ್ದಾರೆ.ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬ್ರಿಜೇಶ್‌ ಮೀರತ್ ನ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಭೋಜ್ ಪುರಿ ಚಿತ್ರರಂಗದಲ್ಲಿ ತ್ರಿಪಾಠಿ ಜನಪ್ರಿಯ ನಟರಾಗಿದ್ದರು.

ಸುಮಾರು 46 ವರ್ಷಗಳ ಕಾಲ ಸಿನಿಮಾ ರಂಗದಲ್ಲೇ ಸೇವೆ ಸಲ್ಲಿಸಿರುವ ತ್ರಿಪಾಠಿ, ಭೋಜ್ ಪುರಿ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಹಿಂದಿ ಸಿನಿಮಾ ರಂಗದಲ್ಲೂ ತಮ್ಮದೇ ಆದ ಪಾತ್ರಗಳ ಮೂಲಕ ಹೆಸರು ಮಾಡಿದವರು.

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ. ಭೋಜ್ ಪುರಿಯ ಓಂ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.

ನೆಚ್ಚಿನ ನಟನ ನಿಧನಕ್ಕೆ ಭೋಜ್ ಪುರಿ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.