ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ತೆಲಂಗಾಣ ಡಿಸಿಎಂ
ತೆಲಂಗಾಣ : ತೆಲಂಗಾಣ ಭವನದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ತೆಲಂಗಾಣ ಮಾಜಿ ಉಪಮುಖ್ಯಮಂತ್ರಿ ಮಹಮೂದ್ ಅಲಿ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ನಡೆದಿದೆ.
ತೆಲಂಗಾಣ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಹಮೂದ್ ಅಲಿ ಅವರ ಆರೋಗ್ಯ ಹದಗೆಟ್ಟು, ಪ್ರಜ್ಞೆ ತಪ್ಪಿಬಿದ್ದಿದ್ದಾರೆ. ಹಠಾತ್ ಆಗಿ ಕುಸಿದ ಅಲಿ ಅವರನ್ನು ಬಿ ಆರ್ ಎಸ್ ಮುಖಂಡರು ಹಿಡಿದುಕೊಂಡು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು.
ಘಟನೆ ವಿಡಿಯೋ ವೈರಲ್ ಆಗಿದೆ. ನೀರು ಕೊಡಿ ಎಂದು ಜನರು ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಸದ್ಯ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿವರಗಳು ಲಭ್ಯವಿಲ್ಲ.