ಗದಗ ಕಟೌಟ್ ದುರಂತ: ಗಾಯಾಳುಗಳಿಗೆ ಪರಿಹಾರ ನೀಡಿದ ಯಶ್
ಕನ್ನಡ ಚಿತ್ರರಂಗದ ಖ್ಯಾತ ನಟರಾಗಿರುವ ಯಶ್ ಅವರ ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟಲು ಹೋಗಿ ಕರೆಂಟ್ ದುರಂತದಿಂದ ಮೂವರು ಮೃತಪಟ್ಟಿದ್ದರು. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಯಶ್ ರವರು ಗಾಯಾಳುಗಳಿಗೆ ಪರಿಹಾರ ನೀಡುದಾಗಿ ಭರವಸೆ ನೀಡಿದ್ದು ಭರವಸೆಗೆ ತಕ್ಕಂತೆ ಕಾರ್ಯವನ್ನೂ ಮಾಡಿದ್ದಾರೆ.
ಯಶ್ ಮೃತ ಯುವಕರ ಕುಟುಂಬಕ್ಕೆ ಭೇಟಿಯಾಗಿ ಪರಿಹಾರ ಧನ ನೀಡಿದ್ದರು. ಚಿಕಿತ್ಸೆಯಲ್ಲಿದ್ದ ಗಾಯಾಳುಗಳಿಗೆ ಪರಿಹಾರ ನೀಡುವುದಾಗಿ ಯಶ್ ಭರವಸೆ ನೀಡಿದ್ದರು ಇದೀಗ ಯಶ್ ಗಾಯಾಳುಗಳ ಕುಟುಂಬಕ್ಕೆ ನೇರವಾಗಿ 1 ಲಕ್ಷ ರೂ. ಅವರ ಖಾತೆಗೆ ವರ್ಗಾಯಿಸಿದ್ದಾರೆ.
ಖ್ಯಾತ ನಟರಾಗಿರುವ ಯಶ್ ಗಾಯಾಳುಗಳ ಕುಟುಂಬಕ್ಕೆ ಯಶ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.