ಗಾಲ್ಫ್ ಕೋರ್ಟ್ ನಲ್ಲಿ ಪಿಗ್ಗಿ-ನಿಕ್ ಕ್ಯೂಟ್ ಪಿಕ್
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಯಾವತ್ತೂ ತನ್ನ ಅಭಿಮಾನಿಗಳಿಗೆ ಸಿನಿಮಾ ಹಾಗೂ ವೈಯುಕ್ತಿಕ ಜೀವನದ ಬಗ್ಗೆ ಅಪ್ ಡೇಟ್ ಕೊಡುವುದನ್ನು ಮಿಸ್ ಮಾಡುವುದೇ ಇಲ್ಲ.ನಿಕ್ ಜೋನಾಸ್ ಸೆಪ್ಟೆಂಬರ್ 16 ರಂದು ತಮ್ಮ 31 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು ಆ ವೇಳೆ ಪ್ರಿಯಾಂಕ ಗಂಡನಿಗೆ ಶುಭ ಕೋರಲು ಹಲವಾರು ಪೊಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಎಂದೂ ನೋಡದ ಪೊಟೋ ಒಂದನ್ನು ಪ್ರಿಯಾಂಕ ಶೇರ್ ಮಾಡಿದ್ದಾರೆ. ಗಾಲ್ಫ್ ಕಾರ್ಟ್‌ನಲ್ಲಿ ಒಟ್ಟಿಗೆ ಪೋಸ್ ನೀಡಿರುವ ಪೊಟೋ ಇದಾಗಿದೆ. ಪ್ರಿಯಾಂಕಾ ಚೋಪ್ರಾ ತನ್ನ ಸ್ನೇಹಿತ ಸ್ಟೀಫನ್ ಜಾನ್ಸನ್ ಬರ್ತ್ ಡೇ ವಿಶ್ ಮಾಡುವಾಗ ಸ್ನೇಹಿತ ಹಾಗೂ ಆತನ ಮಡದಿ ಹಾಗೂ ನಿಕ್ ಪ್ರಿಯಾಂಕ್ ಜೊತೆಗಿರುವ ಪೊಟೋ ಇದಾಗಿದೆ.ತನ್ನ ಗಂಡನೊಂದಿಗೆ ದಿನ ಕಳೆಯುತ್ತಿರುವ ಪ್ರಿಯಾಂಕಾ ಹಲವಾರು ಬ್ಯೂಟಿಪುಲ್ ಪೊಟೋಸ್‌ಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ಸದಾ ಎಂಗೇಜ್ ಆಗಿ ಇಡುತ್ತಾರೆ.