—ಗಾವುದಿ ಮಾಚಯ್ಯ ಅವರ ವಚನ
ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: :
ಒಡಲು ಒಡವೆ ಧರೆ ನಿನಗಾಯಿತ್ತೆಂದು
ಉಣಲೊಲ್ಲದಿಪ್ಪ ಮರುಳೆ ಕೇಳಾ!
ಅಡವಿಯನೆ ಕೆಳೆಗೊಂಡು ನೆಲದೊಳಗೆ ಬೈಚಿಟ್ಟು.
ಹೊಲಬುದಪ್ಪಿ ಭೂತ ಕೊಡಲೊಲ್ಲದವೆಯೊ.
ಹಾಗಕ್ಕೆ ಹಾಗವ ಗಳಿಸಿ ಆಗಾಯಿತ್ತೆಂದು
ಉಣಲೊಲ್ಲದಿಪ್ಪ ಮರುಳೆ ಕೇಳಾ!
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿಗಾವುದಿ ಮಾಚಯ್ಯ ಹೇಳಿದುದ ಕೇಳು ಮಾನವಾ.
-ಗಾವುದಿ ಮಾಚಯ್ಯ