Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ 4.5 ತೀವ್ರತೆಯ ಭೂಕಂಪ..!

ಗುಜರಾತ್: ಕಚ್ ಜಿಲ್ಲೆಯಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದಿಂದಾಗಿ ಜನರು ಬೆಚ್ಚಿ ಬಿದ್ದು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಮನೆಯ ಹೊರಗೆ ಭಯಭೀತಿಯಿಂದ ಆತಂಕದಲ್ಲಿ ಕಳೆಯುತ್ತಿರೋದಾಗಿ ತಿಳಿದು ಬಂದಿದೆ. ಗುಜರಾಜ್ ನ ಕಚ್ ಜಿಲ್ಲೆಯಲ್ಲಿ ಇದೀಗ ಭೂಕಂಪನ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.5 ಎಂಬುದಾಗಿ ದಾಖಲಾಗಿರೋದಾಗಿ ತಿಳಿದು ಬಂದಿದೆ. ಭೂ ಕಂಪನದ ಕೇಂದ್ರ ಬಿಂದು ಗುಜರಾತ್ ನ ಕಚ್‌ನ ದುಧೈನಿಂದ ಈಶಾನ್ಯಕ್ಕೆ 15 ಕಿಲೋಮೀಟರ್ ಎಂಬುದಾಗಿ ಸದ್ಯಕ್ಕೆ ಮಾಹಿತಿ ತಿಳಿದು ಬಂದಿದೆ.