Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗುಡ್ ನ್ಯೂಸ್ KPSC ಯಿಂದ 3,000 ಹುದ್ದೆ ಭರ್ತಿಗೆ ಸಿದ್ಧತೆ!

 

ಬೆಂಗಳೂರು: ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತೆ ರಾಜ್ಯ ಸರ್ಕಾರದ 30 ಇಲಾಖೆಗಳಿಂದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಬಂದಿದೆ. !

ಈ ಹಿನ್ನೆಲೆಯಲ್ಲಿ ಅಂದಾಜು ವೇಳಾಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ವಾರಂತ್ಯದೊಳಗೆ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಒಟ್ಟು 3,000 ಹುದ್ದೆಗಳಿಗೆ ಪ್ರಸ್ತಾವನೆ ಬಂದಿದ್ದು, ಈ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಳವಾಗಲೂಬಹುದು ಎಂದು ಕಾರ್ಯದರ್ಶಿ ಲತಾಕುಮಾರಿ ತಿಳಿಸಿದ್ದಾರೆ.