Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗುಪ್ತಚರ ನೌಕೆ ಪೀಸ್ ಪೀಸ್? ರಷ್ಯಾ ದಾಳಿಗೆ ಕಾರಣ ಏನು….?

ಮಾಸ್ಕೋ: ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ಭೀಕರಗೊಳಿಸಿ, ಉಕ್ರೇನ್ ಸೇನೆ ಓಡುವ ರೀತಿ ಮಾಡುತ್ತಿದೆ. ಜಗತ್ತು ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಯತ್ನಿಸಿದರೂ ಅದು ವರ್ಕೌಟ್ ಆಗುತ್ತಿಲ್ಲ. ಬದಲಾಗಿ ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡಿ ಯುದ್ಧವನ್ನು ಮತ್ತಷ್ಟು ಭೀಕರವಾಗುವಂತೆ ಮಾಡುತ್ತಿದ್ದಾರೆ.

ಇದೀಗ ಮತ್ತೊಮ್ಮೆ ಅದೇ ರೀತಿಯ ಘಟನೆ ನಡೆದಿದ್ದು, ಕಪ್ಪು ಸಮುದ್ರದಲ್ಲಿ ಓಡಾಡುತ್ತಿದ್ದ ಉಕ್ರೇನ್‌ನ ನೌಕೆ ಉಡೀಸ್ ಮಾಡಿದ್ದಾಗಿ ರಷ್ಯಾ ಹೇಳಿದೆ.

2014ರಿಂದಲೂ ರಷ್ಯಾ ಕಪ್ಪುಸಮುದ್ರ ಹಾಗೂ ಕ್ರಿಮಿಯಾ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಆದರೆ ಇದೀಗ ಉಕ್ರೇನ್ ಬೇಕು ಅಂತಲೇ ರಷ್ಯಾದ ಹಿಡಿತದಲ್ಲಿ ಇರುವ ಜಾಗಕ್ಕೆ ಬಂದು ಕಿರಿಕ್ ಮಾಡ್ತಿದೆ ಅಂತಿದೆ. ಈ ಆರೋಪಕ್ಕೆ ಬಲ ನೀಡುವಂತೆ ಉಕ್ರೇನ್ ನೌಕೆಯ ಮೇಲೆ ದಾಳಿ ಮಾಡಿದ್ದಾಗಿ ರಷ್ಯಾ ಆರೋಪಿಸಿದೆ. ಕಪ್ಪು ಸಮುದ್ರದಲ್ಲಿ ಒಡಾಟ ನಡೆಸಿದ್ದ ಉಕ್ರೇನ್ ಗುಪ್ತಚರ ನೌಕೆ ಮೇಲೆ, ರಷ್ಯಾದ ಎಸ್‌ಯು-30 ವಿಮಾನಗಳು ಡೆಡ್ಲಿ ಅಟ್ಯಾಕ್ ಮಾಡಿವೆ ಎನ್ನಲಾಗಿದೆ. ಹೀಗೆ ನಡೆದ ದಾಳಿಯಲ್ಲಿ ಉಕ್ರೇನ್ ನೌಕೆಗೆ ಭಾರಿ ಹಾನಿಯಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಉಕ್ರೇನ್ ಪ್ರತಿಕ್ರಿಯೆ ನೀಡಿಲ್ಲ.

ಕಪ್ಪು ಸಮುದ್ರದ ಮೇಲೆ ರಷ್ಯಾಗೆ ಹಿಡಿತ

ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ ಇದ್ದಂತೆ. ಅದರಲ್ಲೂ ಉಕ್ರೇನ್‌ಗೆ ಇದೇ ಜಲಮಾರ್ಗ ಆಧಾರವಾಗಿ ಉಳಿದಿತ್ತು. ಆದರೆ 2014ರ ಬಳಿಕ ಉಕ್ರೇನ್ ಕಪ್ಪು ಸಮುದ್ರದ ಮೇಲಿನ ಹಿಡತವನ್ನ ಭಾಗಶಃ ಕಳೆದುಕೊಂಡಿತ್ತು. ಯಾವಾಗ 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿತ್ತೋ, ಅಂದಿನಿಂದ ಇಂದಿನ ತನಕ ದಿನದಿನಕ್ಕೂ ಉಕ್ರೇನ್ ನರಳುತ್ತಿದೆ. ತನಗೆ ಅಗತ್ಯ ಇರುವ ದಿನಬಳಕೆ ವಸ್ತುಗಳನ್ನ ತರಿಸಿಕೊಳ್ಳುವುದಕ್ಕೂ ಪರದಾಡುತ್ತಿದೆ ರಷ್ಯಾ ಶತ್ರು ಉಕ್ರೇನ್. ಹೀಗಾಗಿ ಜನ ನರಳುತ್ತಿದ್ದು, ಅಮಾಯಕರ ಬದುಕು ತತ್ತರಿಸಿ ಹೋಗಿದೆ.

ಡ್ರೋನ್ ದಾಳಿ ನಡೆಸುತ್ತಾ ಉಕ್ರೇನ್?

ಅತ್ತ ರಷ್ಯಾ ತನ್ನ ಯುದ್ಧ ವಿಮಾನ ಬಳಸಿ ಉಕ್ರೇನ್‌ನ ಗುಪ್ತಚರ ನೌಕೆ ಉಡಾಯಿಸಿರುವ ಬಗ್ಗೆ ಮಾಹಿತಿ ನೀಡಿದೆ. ಇದೇ ಸಂದರ್ಭದಲ್ಲಿ ಉಕ್ರೇನ್ ಮತ್ತೆ ರಷ್ಯಾ ಮೇಲೆ ಡ್ರೋನ್‌ಗಳ ಮೂಲಕ ದಾಳಿ ನಡೆಸುತ್ತಾ? ಎಂಬ ಭಯ ಶುರುವಾಗಿದೆ. ಏಕೆಂದರೆ ಪದೇ ಪದೆ ಉಕ್ರೇನ್ ಸೇನೆ ರಷ್ಯಾ ವಿರುದ್ಧ ಡ್ರೋನ್ ಅಸ್ತ್ರ ಬಳಸುತ್ತಿದೆ. ಇದೀಗ ತನ್ನ ಗುಪ್ತಚರ ನೌಕೆಗೆ ರಷ್ಯಾ ದಾಳಿಯಿಂದ ನಿಜವಾಗೂ ಸಮಸ್ಯೆ ಆಗಿದ್ದರೆ, ಉಕ್ರೇನ್ ಮತ್ತೆ ಡ್ರೋನ್ ದಾಳಿ ಮಾಡುವ ಆತಂಕ ಇದೆ. ಆದರೆ ರಷ್ಯಾ ಪಡೆಗಳು ಈ ಸಂಭಾವ್ಯ ದಾಳಿ ತಡೆಯಲು ಸಿದ್ಧವಾಗಿವೆ.

ಪುಟಿನ್ ಶತ್ರು ಆಫ್ರಿಕಾದಲ್ಲಿ ಪ್ರತ್ಯಕ್ಷ!

ಒಂದು ಕಡೆ ಉಕ್ರೇನ್ ನೌಕೆ ಮೇಲೆ ದಾಳಿ ಮಾಡಿರುವ ಬಗ್ಗೆ ರಷ್ಯಾ ಹೇಳಿಕೆ ನೀಡಿದೆ. ಈ ನಡುವೆ ರಷ್ಯಾ ಅಧ್ಯಕ್ಷರ ಒಂದು ಕಾಲದ ಗೆಳೆಯ ಮತ್ತು ಈಗಿನ ಶತ್ರು ಪ್ರಿಗೊಝಿನ್ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥನ ಹೊಸ ವಿಡಿಯೋದಲ್ಲಿ ಆಫ್ರಿಕಾದಲ್ಲಿ ಇರುವ ಮಾಹಿತಿ ಸಿಕ್ಕಿದ್ದು, ಉಗ್ರರ ವಿರುದ್ಧ ಪ್ರಿಗೊಝಿನ್ ಗುಡುಗಿದ್ದಾನೆ. ರಷ್ಯಾ ಖಾಸಗಿ ಸೇನೆ ಉಗ್ರರು ಮತ್ತು ಆತಂಕವಾದಿಗಳ ವಿರುದ್ಧ ಹೋರಾಡುತ್ತಿದೆ ಎಂದಿದ್ದಾನೆ ಪ್ರಿಗೊಝಿನ್. ಆದ್ರೆ ಈ ಮೊದಲು ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಪ್ರಿಗೊಝಿನ್ ಮೃತಪಟ್ಟಿದ್ದಾನೆ, ಜೈಲಿಗೆ ಹಾಕಲಾಗಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಈಗ ಪ್ರಿಗೊಝಿನ್ ಮತ್ತೆ ರೀ ಎಂಟ್ರಿ ಕೊಟ್ಟಿರುವುದು ಗೊಂದಲ ಸೃಷ್ಟಿಸಿದೆ.

ಹಾಗೇ ತನ್ನ ಹೇಳಿಕೆಯಲ್ಲಿ ರಷ್ಯಾ ಖಾಸಗಿ ಸೇನೆಯ ಹೋರಾಟದ ಬಗ್ಗೆಯೂ ಪ್ರಿಗೊಝಿನ್ ಮಾತನಾಡಿದ್ದು, ಉಗ್ರರ ವಿರುದ್ಧ ಹೋರಾಟವು ಮುಂದುವರಿಯಲಿದೆ ಎಂದಿದ್ದಾನೆ. ಹೀಗೆ ಪರೋಕ್ಷವಾಗಿ ಶತ್ರುಗಳ ವಿರುದ್ಧ ರಷ್ಯಾ ಖಾಸಗಿ ಸೇನೆ ನಾಯಕ ಮಾತಿನ ಗುದ್ದು ಕೊಟ್ಟಿದ್ದು, ಮತ್ತೆ ರಷ್ಯಾ ಖಾಸಗಿ ಸೇನೆ ಉಕ್ರೇನ್ ವಿರುದ್ಧ ಯುದ್ಧದ ಅಖಾಡಕ್ಕೆ ಎಂಟ್ರಿ ಕೊಡುತ್ತಾ? ಎಂಬ ಅನುಮಾನ ಮೂಡಿದೆ. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಯಾರದ್ದೋ ಕೃತ್ಯಗಳಿಗೆ ಅಮಾಯಕರ ಬದುಕು ಛಿದ್ರವಾಗುತ್ತಿರುವುದು ಬೇಸರದ ಸಂಗತಿ.