ಗೃಹಲಕ್ಷ್ಮಿ ಯೋಜನೆ ಬ್ಯಾಂಕ್ ಗಳಿಗೆ ಸಚಿವ ಪ್ರಿಯಾಂಕ್ ಖಡಕ್ ಸೂಚನೆ
ಬೆಂಗಳೂರು: ರಾಜ್ಯದ ಅನೇಕ ಬ್ಯಾಂಕ್‌ಗಳು ಗೃಹಲಕ್ಷ್ಮಿ ಯೋಜನೆ ಹಣವನ್ನು ಫಲಾನುಭವಿಗಳಿಗೆ ನೀಡದೆ, ಅವರ ಸಾಲದ ವಸೂಲಾತಿಗೆ ಕಡಿತ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಆದರೆ, ಬ್ಯಾಂಕ್‌ಗಳ ಈ ಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಗರಂ ಆಗಿದ್ದಾರೆ. ಗ್ಯಾರಂಟಿ ಯೋಜನೆಯಡಿ ಇದುವರೆಗೂ ಪಾವತಿ ಮಾಡಿದ ಹಣವನ್ನು ವಾಪಸ್ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಕಲಬುರ್ಗಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಇಂತಹ ಘಟನೆಗಳು ವರದಿಯಾಗಿವೆ.