ಗೆಳೆಯನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾಹ್ನವಿ ಕಪೂರ್
ಆಂಧ್ರ ಪ್ರದೇಶ: ಧಡಕ್’ ಚಿತ್ರದ ಮೂಲಕ ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ಜಾಹ್ನವಿ ಕಪೂರ್ ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಬೆಡಗಿ. ಆದರೆ ಇಂದು ನಟಿ ಅಚ್ಚುಕಟ್ಟಾಗಿ ಸೀರೆ ಧರಿಸಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಬಾಲಿವುಡ್ ತಾರೆ ಜೊತೆ ಗೆಳೆಯ ಶಿಖರ್ ಪಹಾರಿಯಾ ಮತ್ತು ಚಿಕ್ಕಮ್ಮ ಮಹೇಶ್ವರಿ ಕಾಣಿಸಿಕೊಂಡಿದ್ದಾರೆ. ಇನ್ನು ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ಶಿಖರ್ ಪಹಾರಿಯಾ ಜೊತೆಗಿನ ಸಂಬಂಧವನ್ನು ಪರೋಕ್ಷವಾಗಿ ದೃಢಪಡಿಸಿದ ಬೆನ್ನಲ್ಲೇ ಜಾಹ್ನವಿ ಕಪೂರ್ ಗೆಳೆಯನ ಜೊತೆ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದು, ಹೊಸ ವದಂತಿಗೆ ಕಾರಣವಾಗಿದೆ.
ಜಾಹ್ನವಿ ಕಪೂರ್ ಅವರು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ, ಇದಕ್ಕೂ ಮುನ್ನ ಕೆಲವು ಸಲ ತಿರುಪತಿಗೆ ಬಂದಿದ್ದರು. ಆದರೆ ಈ ಬಾರಿ ಮಾತ್ರ ವಿಭಿನ್ನ ಎಂಬಂತೆ ನಟಿ ಗೋಲ್ಡನ್ ಕಲರ್ ಸೀರೆ ಧರಿಸಿದ್ದು, ಗೆಳೆಯ ಶಿಖರ್ ಧೋತಿಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.