ಗ್ಯಾಸ್ ಬಳಕೆದಾರರೆ ಹಾಗಾದ್ರೆ, ಆಧಾರ ಬಯೋಮೆಟ್ರಿಕ್: ಯಾವುದೇ ಗಡವು ಇಲ್ಲ
ಚಿತ್ರದುರ್ಗ: ಗ್ಯಾಸ್ ಸಂಪರ್ಕ ಹೊಂದಿರುವರರು ಆಧಾರ ಬಯೋಮೆಟ್ರಿಕ್ ನೀಡಲು ಯಾವುದೇ ಗಡವು ಅಥವಾ ಕೊನೆಯ ದಿನವನ್ನು ಕೇಂದ್ರ ಸರ್ಕಾರ ನೀಡಿಲ್ಲ.
ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ತೆರಳಿ ಆಧಾರ ಬಯೋಮೆಟ್ರಿಕ್ ನೀಡಬಹುದಾಗಿದೆ. ಅನಾವಶ್ಯಕವಾಗಿ ಗೊಂದಲ ಹಾಗೂ ತಪ್ಪು ಮಾಹಿತಿಗೆ ಸಿಲುಕಿ ಗ್ಯಾಸ್ ಏಜೆನ್ಸಿಗಳ ಬಳೆ ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಲ್ಲುವುದು ಬೇಡ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಪ್ರಕಟಣೆ ತಿಳಿಸಿದ್ದಾರೆ.