Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಂದ್ರನ ದಕ್ಷಿಣ ಧ್ರುವದಲ್ಲಿ ನೀರು, ಅನಿಲ ಪತ್ತೆ.!

 

ಆನೇಕಲ್: ಚಂದ್ರನ ದಕ್ಷಿಣ ಧ್ರುವದಲ್ಲಿ ನೀರು, ಅನಿಲ ಮತ್ತು ದ್ರವರೂಪದ ಖನಿಜಾಂಶಗಳಿರುವ ಸಾಧ್ಯತೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಶೋಧನೆ ನಡೆಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ವಿಜ್ಞಾನಿ ಡಾ.ಮೈಲಸ್ವಾಮಿ ಅಣ್ಣಾದೊರೈ ಅವರು ಹೇಳಿದ್ದಾರೆ.

ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಶಾಲೆ, ಕಾಲೇಜುಗಳ ಮುಖ್ಯಸ್ಥರ ಶೃಂಗಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಇಸ್ರೊದ ಚಂದ್ರಯಾನದ ನಂತರ ಚಂದ್ರನಲ್ಲಿರುವ ವಿವಿಧ ಖನಿಜಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತಿದೆ. ಅನಿಲ ಮತ್ತು ದ್ರವರೂಪದ ಖನಿಜಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಂಬರುವ ದಿನಗಳಲ್ಲಿ ಚಂದ್ರನಲ್ಲಿರುವ ಖನಿಜಾಂಶಗಳು ಮನುಕುಲದ ಉದ್ಧಾರಕ್ಕೆ ಸದ್ಬಳಕೆ ಆಗಲಿವೆ ಎಂದು ಹೇಳಿದರು.