Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ

ವಿಜಯವಾಡ: ತೆಲುಗು ದೇಶಂ(ಟಿಡಿಪಿ) ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸೆಪ್ಟೆಂಬರ್ 10 ರಂದು ವಿಜಯವಾಡದ ಭ್ರಷ್ಟಾಚಾರ ವಿರೋಧಿ ಬ್ಯೂರೋ ನ್ಯಾಯಾಲಯವು ಸೆ 23 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳು ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ.

ಇನ್ನು ಆಂಧ್ರ ರಾಜ್ಯಾದ್ಯಂತ, ಮತ್ತು ಜನರು ಗುಂಪುಗಳಾಗಿ ಚಲಿಸದಂತೆ ಮತ್ತು ಯಾವುದೇ ಮಾರಣಾಂತಿಕ ಆಯುಧಗಳನ್ನು ಹೊಂದಿರದಂತೆ ಸೂಚಿಸಲಾಗಿದೆ.

ಸೆ10 ರಂದು ಬೆಳಗ್ಗೆ, ನಾಯ್ಡು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿ ನ್ಯಾಯಮೂರ್ತಿ ಹಿಮಾ ಬಿಂದು ಅವರು ಸರಕಾರದ ಕಾನೂನು ವಕೀಲರು ಮತ್ತು ಟಿಡಿಪಿ ಮುಖ್ಯಸ್ಥರನ್ನು ಪ್ರತಿನಿಧಿಸುವವರ ವಾದವನ್ನು ಆಲಿಸಿದ್ದರು.

ಸೆ. 9 ರಂದು ಆಂಧ್ರಪ್ರದೇಶದ ಸಿಐಡಿ ಮಾಜಿ ಮುಖ್ಯಮಂತ್ರಿಯು 371 ಕೋಟಿ ರೂ. ಕೌಶಲ್ಯ ಅಭಿವೃದ್ಧಿ ಹಗರಣದಲ್ಲಿ ಪ್ರಧಾನ ಸಂಚುಕೋರ ಮತ್ತು ಆರೋಪಿ ನಂಬರ್ 1 ಎಂದು ಹೇಳಿದೆ.